ವಿಟ್ಲ

ಜಗತ್ತಿನಲ್ಲಿ ಅತ್ಯಂತ ವಿಶಿಷ್ಟವಾದ ಕುಟುಂಬವೆಂದರೆ ಪರಶಿವನ ಕುಟುಂಬ: ಭೀಮನಕಟ್ಟೆ ಶ್ರೀಗಳು

ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಹಿನ್ನೆಲೆ ಗುರುವಾರ ಸುಧರ್ಮ ಸಭೆ ಗುರುವಾರ ನಡೆಯಿತು.

ಶ್ರೀ ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಮಾತನಾಡಿ, ದೇವರ ಪೂಜೆಯೊಂದಿಗೆ ಪರಿಸರಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳುವುದೂ ನಮ್ಮ ಕರ್ತವ್ಯ ಎಂದರು.
ದೇವರು ಸರ್ವವ್ಯಾಪಿ ಎಂದಾಗ ನಾವು ದೇವಸ್ಥಾನಕ್ಕೆ ಯಾಕೆ ಬರಬೇಕು ಎಂಬ ಪ್ರಶ್ನೆ ಬರುತ್ತದೆ. ದೇವರು ಎಲ್ಲ ಕಡೆ ಇದ್ದಾನೆ, ನೆಟ್ವರ್ಕ್ ಎಲ್ಲಿ ಸಿಕ್ತದೆ ಎಂದು ಹುಡುಕುತ್ತಾ ಹೋದಂತೆ ದೇವಸ್ಥಾನಕ್ಕೆ ಹೋಗಬೇಕು ಎಂದರು.
ಪವಿತ್ರವಾದ ದೇವರ ಸನ್ನಿಧಾನದಲ್ಲಿ ಲೌಕಿಕ ವಿಚಾರಗಳನ್ನೆಲ್ಲ ಮತನಾಡುತ್ತಾ ಕುಳಿತುಕೊಳ್ಳುವುದು ಸರಿಯಲ್ಲ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ತಾನು ಶಾಸಕನಾಗಿದ್ದಾಗ ಕರೋಪಾಡಿ ಗ್ರಾಮಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿ, ಪದ್ಯಾಣ ದೇವಸ್ಥಾನದ ಬ್ರಹ್ಮಕಲಶೋತ್ಸವದಿಂದ ದೇವರ ಶಕ್ತಿಯನ್ನು ಇಮ್ಮಡಿಗೊಳಿಸುವ ಶಕ್ತಿಯನ್ನು ದೊರಕಿಸುತ್ತದೆ ಎಂದರು. ಒಂದು ಕಾಲದಲ್ಲಿ ರಾಜಾಶ್ರಯದಲ್ಲಿದ್ದ ದೇವಸ್ಥಾನಕ್ಕೆ ಈಗ ಜನರು ಕೊಡುಗೆ ನೀಡುತ್ತಿದ್ದಾರೆ ಎಂದರು. ದೇವಸ್ಥಾನದ ಜೀರ್ಣೋದ್ಧಾರ ಜೊತೆ ಮನುಷ್ಯರ ಆತ್ಮೋನ್ನತಿಯೂ ಆಗಬೇಕು ಎಂದರು.
ಹಿರಿಯ ವೈದಿಕ ವಿದ್ವಾಂಸ ಬೋಳಂತಕೋಡಿ ರಾಮ ಭಟ್ ದೀಪಪ್ರಜ್ವಲನ ಮಾಡಿ ಮಾತನಾಡಿ, ನಮ್ಮೆಲ್ಲರನ್ನೂ ಕಾಪಾಡುವ ದೇವರ ಲಿಂಗಕ್ಕೆ ಶಕ್ತಿ ದೊರಕಲು ಬ್ರಹ್ಮಕಲಶ ಮಾಡಲಾಗುತ್ತದೆ. ಇದರಿಂದ ಹುಟ್ಟುವ ದೇವರ ಶಕ್ತಿ ನಮ್ಮೆಲ್ಲರನ್ನೂ ಕಾಪಾಡುತ್ತಾನೆ ಎಂದರು.
ಅಧ್ಯಕ್ಷತೆಯನ್ನು ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ವಹಿಸಿದ್ದರು
ಕರ್ಣಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ನಾಗರಾಜ ಉಪಾಧ್ಯಾಯ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸೇರಾಜೆ ಗೋಪಾಲಕೃಷ್ಣ ಭಟ್, ಶ್ರೀ ಕ್ಷೇತ್ರ ನಂದಾವರದ ಪ್ರಧಾನ ಅರ್ಚಕ ವೇ.ಮೂ.ಮಹೇಶ ಭಟ್, ಉದ್ಯಮಿ ಅಜಯ್ ಪುರುಷೋತ್ತಮ ಶೆಟ್ಟಿ, , ನಂದಾವರ ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕಾಂತಾಡಿಗುತ್ತು, ಉಪಸ್ಥಿತರಿದ್ದರು.
ಹೊರೆಕಾಣಿಕೆ ಸಮಿತಿ ಸಂಚಾಲಕ ಪಟ್ಲಗುತ್ತು ವಿನೋದ್ ಶೆಟ್ಟಿ ಸ್ವಾಗತಿಸಿದರು. ಕೃಷ್ಣ ಎಂ.ಆರ್ ಕಾರ್ಯಕ್ರಮ ನಿರ್ವಹಿಸಿದರು.
ಸೇರಾಜೆ ಶ್ರೀನಿವಾಸ ಭಟ್ ಮತ್ತು ಸಾಯೀಶ್ವರಿ ಶೆಟ್ಟಿ ಪಟ್ಲಗುತ್ತು ಕಾರ್ಯಕ್ರಮ ನಿರ್ವಹಿಸಿದರು.
ಬೆಳಗ್ಗಿನ ಪೂಜೆ, ಗಣಪತಿ ಹೋಮ, ಅಂಕುರ ಪೂಜೆ, ಮಧ್ಯಾಹ್ನ ಪೂಜೆ, ಸಂಹಾರ ತತ್ವಹೋಮ, ಸಂಹಾರ ತತ್ವಕಲಶ, ಶಯ್ಯಾ ಮಂಟಪದಲ್ಲಿ ಕುಂಭೇಶ ಕರ್ಕರಿ ಕಲಶ ಪೂಜೆ, ವಿದ್ಯೇಶ್ವರ ಕಲಶ ಪೂರಣೆ, ನಿದ್ರಾ ಕಲಶ ಪೂರಣೆ, ಅಗ್ನಿ ಜನನ, ಬಿಂಬ ಶುದ್ಧಿಕಲಶ ಪೂರಣೆ, ಶ್ರೀ ದೇವರಿಗೆ ಸಂಹಾರ ತತ್ವ ಕಲಶಾಭಿಷೇಕ, ಜೀವಕಲಶ ಪೂರಣೆ, ಜೀವೋದ್ವಾಸನ ಕ್ರಿಯೆ, ಜೀವ ಕಲಶವನ್ನು ಶಯ್ಯೆಯಲ್ಲಿಡುವ ಕಾರ್ಯಕ್ರಮ ನಡೆಯಿತು.
ಸಂಜೆ ಅಂಕುರ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ವಾಸ್ತುಪೂಜೆ, ಬಿಂಬ ಶುದ್ಧಿಕಲಶಾಭಿಷೇಕ, ಶಿರಸ್ತತ್ವಹೋಮ, ಶಾಂತಿಹೋಮ, ಧ್ಯಾನಾಧಿವಾಸ ಕ್ರಿಯೆ, ಭದ್ರಕಮಂಡಲ ಪೂಜೆ, ಅಧಿವಾಸ ಹೋಮ, ಶಯ್ಯೆಯಲ್ಲಿ ರಾತ್ರಿಪೂಜೆ, ಅಧಿವಾಸ ಬಲಿ, ಶಕ್ತಿಪೂಜೆ, ರತ್ನನ್ಯಾಸ, ಪೀಠಾಧಿವಾಸ, ಪ್ರಾಸಾದ ಅಧಿವಾಸ ಕಾರ್ಯಕ್ರಮಗಳು ನಡೆದವು.
ಬೆಳಗ್ಗೆ ಚಿಪ್ಪಾರು ಶ್ರೀಜ್ಯೇಷ್ಠರಾಜ ಭಜನಾ ಮಂಡಳಿ, ಬಾಯಾರು ಶ್ರೀ ಸತ್ಯಸಾಯಿ ಸೇವಾ ಸಮಿತಿಯಿಂದ ಭಜನಾ ಕಾರ್ಯಕ್ರಮ. ರಜನ್ ವಗೆನಾಡು ಮತ್ತು ಬಳಗದ ಭಕ್ತಿ ಸಂಗೀತ. ಮಚ್ಚೇಂದ್ರನಾಥ ಕನ್ಯಾನ ಮತ್ತು ಸಂಗಡಿಗರಿಂದ ಸ್ಯಾಕ್ಸೋಫೋನ್ ಕಛೇರಿ ನಡೆದವು.
ಮಧ್ಯಾಹ್ನ ಕುರಿಯು ಗಣಪತಿ ಶಾಸ್ತ್ರಿಗಳ ನೇತೃತ್ವದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ. ಪ್ರಸಂಗ ಸಂಜಯ ರಾಯಭಾರ ನಡೆಯಿತು. ರಾತ್ರಿ ಸೂರ್ಯಗಾಯತ್ರಿ ಬಳಗದ ಸಂಗೀತ ಕಛೇರಿ ನಡೆಯಿತು.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ದೇವಸ್ಥಾನಗಳ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುವುದು ಸಮಾಜದ ಜವಾಬ್ದಾರಿ: ಕಶೆಕೋಡಿ ಸೂರ್ಯನಾರಾಯಣ ಭಟ್

+++++++++++++++++++++++++++ ಪದ್ಯಾಣದ ಮಣ್ಣಿನಲ್ಲಿ ಸಂಸ್ಕೃತಿ ಇದೆ: ಗುರ್ಮೆ ಸುರೇಶ್ ಶೆಟ್ಟಿ (more…)

23 hours ago