ಬಂಟ್ವಾಳ

ಜನಗಣತಿ: ಮೊದಲ ಹಂತ ಮನೆ ಪಟ್ಟಿ, ಸ್ವಯಂ ಮನೆಗಣತಿಗೆ ಅವಕಾಶ – Details

ರಿಜಿಸ್ಟಾರ್‌ ಜನರಲ್‌ ಮತ್ತು ಜನಗಣತಿ ಆಯುಕ್ತರ ಆದೇಶದಂತೆ ಜನಗಣತಿ ಕಾಯ್ದೆ -1948ರ ಪ್ರಕಾರ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಭಾರತದ ಮೊದಲ ಡಿಜಿಟಲ್‌ ಜನಗಣತಿ ಕಾರ್ಯವನ್ನು ಎರಡು ಹಂತಗಳಲ್ಲಿ ನಡೆಸಿ, ಗಣತಿ ಮಾಹಿತಿಯನ್ನು ಸಂಗ್ರಹಿಸುವ ಪ್ರಕ್ರಿಯೆ ಚಾಲನೆಗೊಳ್ಳಲಿದೆ. ಈ ಬಗ್ಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಯಂ ಮನೆ ಗಣತಿ ಕಾರ್ಯವನ್ನು ಮಾಡಲು ಅವಕಾಶವನ್ನು ನೀಡಲಾಗಿದೆ.

ಆದರಂತೆ, ಜನಗಣತಿ ಕಾಯ್ದೆ ಕಾಯ್ದೆಯ ಪ್ರಕಾರ ತಮ್ಮ ಮಾಹಿತಿ, ಹೆಸರು ಮತ್ತು ಗುರುತುಗಳು ಗೌಪ್ಯವಾಗಿ ಇಡಲಾಗುತ್ತದೆ. ತೆರಿಗೆ, ಪೋಲೀಸ್‌ ಅಥವಾ ತನಿಖೆಯಲ್ಲಿ ಉಪಯೋಗಿಸುವುದಿಲ್ಲ. ಸುರಕ್ಷಿತ ಸರ್ವರ್‌ ಗಳಲ್ಲಿ ಮಾಹಿತಿಯನ್ನು ಎನ್ಕ್ರಿಪ್ಟ್‌ ಮಾಡಲಾಗುತ್ತದೆ. ರಾಷ್ಟ್ರ ನಿರ್ಮಾಣಕ್ಕಾಗಿ ಮಾತ್ರ ಬಳಸ ಲಾಗುತ್ತದೆ ಎಂದು ಬಂಟ್ವಾಳ ತಹಸೀಲ್ದಾರ್ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಿಟ್ಟಿನಲ್ಲಿ ಸಾರ್ವಜನಿಕರು ಏ1ರಿಂದ ಏಪ್ರಿಲ್‌15ರವರೆಗೆ ನಿರ್ದೇಶನಾಲಯದಿಂದ ನೀಡಿರುವ ಅಧಿಕೃತ ಪೋರ್ಟಲ್‌ https://se.census.gov.in/.census.gov.in ಗೆ ಭೇಟಿ ನೀಡಿ,  ಸ್ವಯಂ ಮನೆ ಗಣತಿ ಕಾರ್ಯವನ್ನು ಮಾಡಬಹುದಾಗಿದೆ. ಇದು ಒಂದು ವಿಶೇಷ ಸೌಲಭ್ಯವಾಗಿದೆ ಎಂದಿದ್ದಾರೆ.

  • ಅಧಿಕೃತ ಪೋರ್ಟಲ್‌ se.census.gov.in ಗೆ ಭೇಟಿ ನೀಡಿ
  • ತಮ್ಮ ಮೊಬೈಲ್‌ ಸಂಖ್ಯೆಗೆ ಬರುವ OTP ಮೂಲಕ ಲಾಗಿನ್‌ ಆಗುವುದು
  • ತಮ್ಮ ರಾಜ್ಯ , ಜಿಲ್ಲೆ ಹಾಗೂ ಸ್ಥಳೀಯ ವಿವರಗಳನ್ನು ಆಯ್ಕೆಮಾಡಿಕೊಳ್ಳುವುದು
  • ಡಿಜಿಟಲ್‌ ಮ್ಯಾಪ್‌ ನಲ್ಲಿ ನಿಮ್ಮ ಮನೆಯ ಸ್ಥಳವನ್ನು ಗುರುತಿಸುವುದು
  • ನಿಮ್ಮ ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡುವುದು
  • ಸಲ್ಲಿಸಿದ ನಂತರ ನಿಮ್ಮ SE ID (SELF ENUMERATION ID) ಸ್ವೀಕರಿಸಲಾಗುತ್ತದೆ
  • ಸದ್ರಿ SE ID (SELF ENUMERATION ID) ನ್ನು ಸುರಕ್ಷಿತವಾಗಿರಿಸಿಕೊಳ್ಳಿರಿ
  • 16-04-2026ರ ನಂತರ ತಮ್ಮ ಮನೆಗೆ ಗಣತಿದಾರರು ಭೇಟಿ ನೀಡಿದಾಗ ಈ ಮೇಲಿನಂತೆ ಪಡೆದುಕೊಂಡ ನಿಮ್ಮ SE ID (SELF ENUMERATION ID) ಯನ್ನು ಒದಗಿಸಬೇಕು.
  • ಗಣತಿದಾರರು SE ID (SELF ENUMERATION ID) ಮೂಲಕ ವಿವರಗಳನ್ನು ಪರಿಶೀಲಿಸಿಕೊಂಡು ದೃಢೀಕರಿಸುತ್ತಾರೆ.
  • ಮನೆ ಗಣತಿಯ ಕಾರ್ಯದ ನಿಖರತೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಕೊಳ್ಳಲು ಗಣತಿದಾರರು ಮತ್ತು ಮೇಲ್ವಿಚಾರಕರ ಪರಿಶೀಲನೆಗೆ ಒಳಪಟ್ಟಿರುತ್ತದೆ
  • ಇದರಿಂದಾಗಿ ಸಮಯದ ಉಳಿತಾಯವಾಗುತ್ತದೆ. ನಿಖರವಾದ ಮಾಹಿತಿ ಸಂಗ್ರಹವಾಗಿ ವೇಗವಾದ ಮಾಹಿತಿಗಳ ಸಂಸ್ಕರಣೆಯಾಗುತ್ತದೆ.

ತಾಲೂಕಿನ ಎಲ್ಲಾ ಸಾರ್ವಜಿನಿಕರು ತಾವೇ ಆನ್‌ ಲೈನ್‌ ಲಿಂಕ್‌ https://se.census.gov.in ಮೂಲಕ ಭಾಗವಹಿಸಿ, ಗಣತಿಯನ್ನು ಮಾಡುವಂತೆ ತಹಸೀಲ್ದಾರ್ ಮನವಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ದೇವಸ್ಥಾನಗಳ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುವುದು ಸಮಾಜದ ಜವಾಬ್ದಾರಿ: ಕಶೆಕೋಡಿ ಸೂರ್ಯನಾರಾಯಣ ಭಟ್

+++++++++++++++++++++++++++ ಪದ್ಯಾಣದ ಮಣ್ಣಿನಲ್ಲಿ ಸಂಸ್ಕೃತಿ ಇದೆ: ಗುರ್ಮೆ ಸುರೇಶ್ ಶೆಟ್ಟಿ (more…)

18 hours ago