ಬಂಟ್ವಾಳ

ವಿಹಿಂಪ, ಬಜರಂಗದಳ ವತಿಯಿಂದ ಸಾರ್ವಜನಿಕ ಶನಿಪೂಜೆ, ಟೀಮ್ ಭಜರಂಗಿ ವತಿಯಿಂದ ನಿಧಿ ಹಸ್ತಾಂತರ

ವಿಶ್ವ ಹಿಂದು ಪರಿಷತ್, ಬಜರಂಗದಳ ಸಜೀಪ ಖಂಡ ಸಮಿತಿ ವತಿಯಿಂದ ಮಾರ್ನಬೈಲ್ ನಾಗನವಳಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಶನಿಪೂಜೆ ಮತ್ತು ಗೋಪೂಜೆ ಹಾಗೂ ಟೀಮ್ ಭಜರಂಗಿ ಸಜೀಪ ವತಿಯಿಂದ ಅಶಕ್ತ ಬಡ ಕುಟುಂಬಗಳಿಗೆ ನಿಧಿ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಬಂಟ್ವಾಳ ತಾಪಂ ಮಾಜಿ ಅಧ್ಯಕ್ಷ ಯಶವಂತ ಡಿ. ದೇರಾಜೆಗುತ್ತು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಿಯುಗದಲ್ಲಿ ಸಂಘಟನೆಯೊಂದೇ ಎಲ್ಲದಕ್ಕೂ ಉತ್ತರ ನೀಡಲು ಸಾಧ್ಯ. ಆ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟುಗೂಡಿ ಧರ್ಮವನ್ನು ಉಳಿಸೋಣ ಎಂದರು.

ವಿಶ್ವ ಹಿಂದೂ ಪರಿಷತ್ ಕಲ್ಲಡ್ಕ ಪ್ರಖಂಡ ಅಧ್ಯಕ್ಷ ಸಚಿನ್ ಮೆಲ್ಕಾರ್ ಮಾತನಾಡಿ, ನಾವೆಲ್ಲರೂ ವಿವಿಧ ಜಾತಿ ಭೇದಗಳನ್ನು ಮರೆತು ಒಟ್ಟುಗೂಡಿ ಭವ್ಯ ಭಾರತದ ಭವಿಷ್ಯಕ್ಕಾಗಿ ಶ್ರಮಿಸೋಣ ಎಂದರು.

ಜಾಹೀರಾತು

ದ. ಕ. ಜಿಲ್ಲಾ ಬಿಜೆಪಿ ನಾಯಕ ಸಂದೇಶ್ ಶೆಟ್ಟಿ ಅರೆಬೆಟ್ಟು, ಉದ್ಯಮಿ ಶ್ರೀಕಾಂತ್ ಶೆಟ್ಟಿ ಸಂಕೇಶ, ದುರ್ಗಾಪರಮೇಶ್ವರಿ ದೇವಸ್ಥಾನದ ಟ್ರಸ್ಟಿ ರಾಮಕೃಷ್ಣ ರಾವ್ ಮಾರ್ನಬೈಲ್, ಬಜರಂಗದಳದ ಮುಖಂಡ ಮಿಥುನ್ ಪೂಜಾರಿ ಕಲ್ಲಡ್ಕ, ಬಿಜೆಪಿ ಮುಖಂಡ ಗಿರೀಶ್ ಕುಕ್ಕುದಕಟ್ಟೆ ಹಾಗೂ ಬಜರಂಗದಳ ಕಲ್ಲಡ್ಕ ಪ್ರಖಂಡ ಸಂಚಾಲಕ ಅಮಿತ್ ಅಂಚನ್ ಉಪಸ್ಥಿತರಿದ್ದರು.

ಪರಿಸರದ ಅಶಕ್ತ ಕುಟುಂಬಗಳಿಗೆ ನಿಧಿ ಹಸ್ತಾಂತರ, ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡ ವಿವಿಧ ಸಂಘಟನೆಗಳು ಹಾಗೂ ಭಜನಾ ತಂಡಗಳನ್ನು ಗುರುತಿಸಿ ಟೀಮ್ ಭಜರಂಗಿ ವತಿಯಿಂದ ಗೌರವಿಸಲಾಯಿತು.

ವಿಶ್ವ ಹಿಂದೂ ಪರಿಷತ್ ಕಲ್ಲಡ್ಕ ಪ್ರಖಂಡದ ಕಾರ್ಯದರ್ಶಿ ಲೋಹಿತ್ ಪಣೋಲಿಬೈಲ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ವಿಶ್ವ ಹಿಂದೂ ಪರಿಷತ್ ಸಜಿಪ ಖಂಡ ಸಮಿತಿಯ ಉಪಾಧ್ಯಕ್ಷ ಹರೀಶ್ ಕೊಳಕೆ ವಂದಿಸಿದರು. ಮನೋಹರ ಕಾರಾಜೆ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.