march 31L ವೇ.ಮೂ.ಸುಬ್ರಹ್ಮಣ್ಯ ಕಾರಂತ ನೇತೃತ್ವದಲ್ಲಿ ಸೌಂದರ್ಯಲಹರಿ ಪಾರಾಯಣ ನಡೆಯಿತು
ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯುತ್ತಿದ್ದು, ಏಪ್ರಿಲ್ 1ರಂದು ನಡೆಯುವ ಕಾರ್ಯಕ್ರಮಗಳ ವಿವರ ಹೀಗಿದೆ.
ಬೆಳಗ್ಗೆ 8.30ರಿಂದ ಪಳ್ಳದಕೋಡಿ ಮತ್ತು ಕುರುಡಪದವು ತಂಡಗಳಿಂದ ಭಜನೆ ಬಳಿಕ ಬೆಳಗ್ಗೆ 9.30ರಿಂದ ಮಂಜೇಶ್ವರದ ಶ್ರೀ ವಿಷ್ಣು ಯಕ್ಷಬಳಗ ಮಜಿಬೈಲು ತಂಡದಿಂದ ಇಂದ್ರಜಿತು ಕಾಳಗ ಯಕ್ಷಗಾನ ತಾಳಮದ್ದಳೆ ಇರಲಿದೆ. ಮಧ್ಯಾಹ್ನ 1.30ರಿಂದ ಅದಿತಿ ಕೋಂಕೋಡಿ ಬಳಗದ ಶಾಸ್ತ್ರೀಯ ಸಂಗೀತ, 2.30ರಿಂದ ವಿದುಷಿ ಡಾ. ನಿಶಿತಾ ಪುತ್ತೂರು ನಿರ್ದೇಶನದ ನೃತ್ಯನಿರತ ಪುತ್ತೂರು ತಂಡದಿಂದ ಭರತನಾಟ್ಯ ಕಾರ್ಯಕ್ರಮ ಇರಲಿದೆ.
ಸಂಜೆ 4.30ಕ್ಕೆ ಸುಧರ್ಮ ಸಭೆಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ದೀಪಪ್ರಜ್ವಲನ ಮಾಡುವರು. ಮಲಾರುಬೀಡು ಯಜಮಾನ ಕರಿಯಣ್ಣ ಪಕ್ಕಳ ಅಧ್ಯಕ್ಷತೆ ವಹಿಸುವರು. ಧಾರ್ಮಿಕ ಉಪನ್ಯಾಸವನ್ನು ವಿದ್ವಾಂಸ ಕಶೆಕೋಡಿ ಸೂರ್ಯನಾರಾಯಣ ಭಟ್ ನೀಡುವರು. ಶ್ರೀ ತಿರುಮಲ ತಿರುಪತಿ ದೇವಸ್ಥಾನದ ಟ್ರಸ್ಟಿ ನರೇಶ್ ಕುಮಾರ್ ಗೌರವ ಉಪಸ್ಥಿತಿ ಇರಲಿದೆ. ಅಭ್ಯಾಗತರಾಗಿ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ ಗಂಟಿಹೊಳೆ, ಪ್ರತಾಪ್ ಸಿಂಹ ನಾಯಕ್, ರವಿಕುಮಾರ್, ಕೇಶವ ಪ್ರಸಾದ್, ಮಾಜಿ ಶಾಸಕ ಸಂಜೀವ ಮಠಂದೂರು, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಸೌಂದರ್ಯ ಎಜುಕೇಶನ್ ಟ್ರಸ್ಟ್ ಬೆಂಗಳೂರು ಅಧ್ಯಕ್ಷ ಸೌಂದರ್ಯ ಮಂಜಪ್ಪ, ಹರಿಹರಪುರ ಪ್ರಭೋದಿನಿ ಗುರುಕುಲ ವ್ಯವಸ್ಥಾಪಕ ಉಮೇಶ್ ರಾವ್, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನಿರ್ದೇಶಕ ಅಕ್ಷಯ್ ಕೆ.ಸಿ, ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ, ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ಉಳ್ಳಾಲ ಕಾಪಿಕ್ಕಾಡು ಉಮಾಮಹೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಎ.ಜೆ.ಶೇಖರ್, ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ದಿನೇಶ್ ರೈ ಕಳ್ಳಿಗೆ, ಕೆಎಂಎಫ್ ನಿರ್ದೇಶಕ ನಂದರಾಮ ರೈ, ಪಾಣೆಮಂಗಳೂರು ರೈತ ಸೇವಾ ಸಂಘ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಅಗ್ರಜ ಬಿಲ್ಡರ್ ನ ಸಂದೇಶ್ ಶೆಟ್ಟಿ, ಬನಾರಿ ಗೋಪಾಲಕೃಷ್ಣ ದೇವಸ್ಥಾನ ನಿರ್ಮಾಣ, ನಿರ್ವಹಣಾ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರನಾಥ್ ಪಿ.ಎಸ್, ಉದ್ಯಮಿ ಮಾಧವ ಮಾವೆ, ಹಿಂದು ಮುಖಂಡ ಮುರಳಿಕೃಷ್ಣ ಹಸಂತಡ್ಕ ಭಾಗವಹಿಸುವರು. ಬಳಿಕ ಡಾ. ವಿನಯಾ ಪದ್ಯಾಣ ಮತ್ತು ಬಳಗದಿಂದ ಭಕ್ತಿಗಾನ ಸುಧಾ ನಡೆಯಲಿದೆ.