ಬಂಟ್ವಾಳ

ಪದ್ಯಾಣ ಶೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೇಗೆ ಹೋಗಬಹುದು?

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣದಲ್ಲಿ ಸೋಮವಾರ ಮಾರ್ಚ್ 30ರಂದು ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಪದ್ಯಾಣ ಶ್ರೀ ಮಹಾಲಿಂಗೇಶ್ವರನ ಸನ್ನಿಧಿಗೆ ಹೇಗೆ ಹೋಗುವುದು ಎಂಬ ಕುರಿತು ಸಂದೇಹಗಳಿದ್ದರೆ ಇಲ್ಲಿದೆ ಮಾಹಿತಿ.

ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶದ ಪ್ರಯುಕ್ತ ಭಜನಾ ನವೋತ್ಸವವನ್ನು ಇಂದು ಬೆಳಗ್ಗೆ ಬೇತ ಕೃಷ್ಣ ಭಟ್ಟರು ಉದ್ಘಾಟಿಸಿದರು. ಪ್ರತೀದಿನ ಬೆಳಿಗ್ಗೆ ವಿವಿಧ ಭಜನಾ ತಂಡಗಳು ಭಜನೆ ನಡೆಸಿ ಕೊಡಲಿದ್ದಾರೆ

ಕಾಸರಗೋಡಿನಿಂದ : ಕಾಸರಗೋಡಿನಿಂದ (ಉಪ್ಪಳ, ಕೈಕಂಬ, ಪೈವಳಿಕೆ ಬಾಯಾರು, ಮುಗುಳಿ, ಬೇತ ಮಾರ್ಗ) ೪೬ ಕಿಲೋಮೀಟರ್ ದೂರದಲ್ಲಿದೆ.

ಮಂಗಳೂರಿನಿಂದ ಬರುವವರು: ಮಂಗಳೂರಿನಿಂದ 39 ಕಿಲೋಮೀಟರ್ (ಸ್ವಂತ ವಾಹನದಲ್ಲಿ ತೊಕ್ಕೊಟ್ಟು, ಮುಡಿಪು, ಆನೆಕಲ್ಲು, ಬೇಡಗುಡ್ಡೆ ಮಾರ್ಗದಲ್ಲಿ ಪ್ರಯಾಣ ಮಾಡಬಹುದು) ದೂರದಲ್ಲಿದೆ ಪದ್ಯಾಣ.

ಜಾಹೀರಾತು

ವಿಟ್ಲದಿಂದ ಬರುವವರು: ವಿಟ್ಲದಿಂದ 18 ಕಿಲೋಮೀಟರ್ ದೂರ. (ಕನ್ಯಾನ, ಮಿತ್ತನಡ್ಕ ಮಾರ್ಗ) ಮಂಗಳೂರು ಬಿ.ಸಿ.ರೋಡ್ ಮಾರ್ಗವಾಗಿ ವಿಟ್ಲಕ್ಕೆ ಬಂದು ಪದ್ಯಾಣಕ್ಕೆ ಬರಲೂಬಹುದು. ಆದರೆ ಅದು ಸುತ್ತು ಬಳಸಿ ಬಂದಂತಾಗುತ್ತದೆ.

ಪುತ್ತೂರಿನಿಂದ ವಿಟ್ಲ ಮಾರ್ಗ: ಪುತ್ತೂರಿನಿಂದ ವಿಟ್ಲಕ್ಕೆ ಬಂದು ಅಲ್ಲಿಂದ ಪದ್ಯಾಣಕ್ಕೆ ಕನ್ಯಾನ, ಮಿತ್ತನಡ್ಕ ಮಾರ್ಗವಾಗಿ ಬರಬಹುದು. ಪುತ್ತೂರಿನಿಂದ (ವಿಟ್ಲ ಮಾರ್ಗ) ಬೆಳಗ್ಗೆ ೭.೧೫, ೮.೨೦ ಹಾಗೂ ವಿಟ್ಲದಿಂದ ಬೆಳಗ್ಗೆ ೭.೪೫, ೯.೧೦ ಹಾಗೂ ಸಂಜೆ ೬.೩೦ ಗಂಟೆಗೆ ಪದ್ಯಾಣಕ್ಕೆ ಕೆಎಸ್. ಆರ್.ಸಿ ಬಸ್ ಸೌಲಭ್ಯ ಇದೆ. ಉಳಿದಂತೆ ಮಿತ್ತನಡ್ಕಕ್ಕೆ ಬರುವ ಬಸ್‌ಗಳಿದ್ದು ಅಲ್ಲಿಂದ ಖಾಸಗಿ ವಾಹನ (ರಿಕ್ಷಾ)ಗಳ ಮೂಲಕ (೩ ಕಿಲೋಮೀಟರ್) ಪದ್ಯಾಣವನ್ನು ತಲುಪಬಹುದು. ವ್ಯವಸ್ಥೆ ದೃಷ್ಟಿಯಿಂದ ಬಸ್ಸುಗಳು ಸದ್ಯಕ್ಕೆ ಮಿತ್ತನಡ್ಕಕ್ಕೆ ಹೋಗುತ್ತಿವೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.