ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಾ.30ರಂದು ಪದ್ಯಾಣಕ್ಕೆ ಏಕಾದಶ ತೀರ್ಥ ಕಲಶಗಳು ಹಾಗೂ ಹಸಿರುವಾಣಿಯ ಭವ್ಯ ಮೆರವಣಿಗೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ, ಮಹಾಕಾಳಿ ದೇವಸ್ಥಾನದ ಮುಂಭಾಗದಿಂದ ಹೊರಟಿತು.
ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತಿಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮೆರವಣಿಗೆಗೆ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು.
ಶಾಸಕ ಹರೀಶ್ ಪೂಂಜಾ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಹಿರಿಯ ನ್ಯಾಯವಾದಿ ಡಾ.ಅರುಣ ಶ್ಯಾಮ್, ಪದ್ಯಾಣ ದೇವಸ್ಥಾನದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಸೇರಾಜೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮಸುದರ್ಶನ ಹೊಸಮೂಲೆ, ಕಾರ್ಯದರ್ಶಿ ಕೃಷ್ಣ ಎಂ.ಆರ್. ಕಡಬ, ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು, ಉಪ್ಪಿನಂಗಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ ನಾಯ್ಕ್, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಈಶಾನ್ಯ ಪದ್ಯಾಣ, ಹೊರೆಕಾಣಿಕೆ ಸಮಿತಿ ಪ್ರಧಾನ ಸಂಚಾಲಕರಾದ ಪಟ್ಲಗುತ್ತು ವಿನೋದ್ ಶೆಟ್ಟಿ, ಉಪ್ಪಿನಂಗಡಿ ಹೊರೆಕಾಣಿಕೆ ಸಮಿತಿ ಸಂಚಾಲಕರಾದ ಸುದರ್ಶನ್ ಉಪ್ಪಿನಂಗಡಿ, ಸಂಯೋಜಕರಾಗಿ ಮಹೇಶ್ ಬಜತ್ತೂರು ಹಾಗೂ ಭಜನಾ ಸಂಕೀರ್ತನೆಗಳ ಸಂಯೋಜಕರಾದ ಉಷಾ ಮುಳಿಯ, ಗೀತಾ ಯತೀಶ್ ಬಂಗೇರಾ, ಕಸ್ತೂರಿ ಶಾಂತಪ್ಪ ಹಿರೇಬಂಡಾಡಿ, ಲೋಕೇಶ್ ಬೆತ್ತೋಡಿ, ರಾಜಶೇಖರ್ ಹಾಗೂ ಕಲಶ ಸಂಯೋಜಕರಾದ ರವಿ ಇಳಂತಿಲ, ಸುನಿಲ್ ದಡ್ಡು ಹಾಗೂ ವ್ಯವಸ್ಥಾ ಸಮಿತಿ ಸಂಯೋಜಕರಾಧ ಸುರೇಶ್ ಅತ್ರಮಜಲ್, ಕಿಶೋರ್ ಉಪ್ಪಿನಂಗಡಿ ಮತ್ತಿತರರು ಈ ಸಂದರ್ಭ ಹಾಜರಿದ್ದರು. ಇದೇ ವೇಳೆ ದೇವರ ಸನ್ನಿಧಿಯಲ್ಲಿ ಪವಿತ್ರ ಜಲದ ಪೂಜೆ, ಗಂಗಾರತಿ ನಡೆಯಿತು. ಆಕರ್ಷಕ ಮೆರವಣಿಗೆ ಗಮನ ಸೆಳೆಯಿತು.