ಪದ್ಯಾಣ ಬ್ರಹ್ಮಕಲಶಾಭಿಷೇಕ: ಪಾರ್ಕಿಂಗ್ ವ್ಯವಸ್ಥೆ ಹೀಗಿರಲಿದೆ
ದೇವಸ್ಥಾನದ ಪೂರ್ವಭಾಗ ಹಾಗೂ ದಕ್ಷಿಣ ಭಾಗದಲ್ಲಿ ಅತೀ ಅಗತ್ಯ ವ್ಯವಸ್ಥೆ ಹಾಗೂ ಅತಿಥಿ ಗಣ್ಯರಿಗೆ (VIP) ಪಾರ್ಕಿಂಗ್ ವ್ಯವಸ್ಥೆ ಯನ್ನು ಮೀಸಲಿಡಲಾಗಿದೆ.
ಮಿತ್ತನಡ್ಕದಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದ್ದು, ಅಲ್ಲಿಂದ ಪದ್ಯಾಣಕ್ಕೆ ದೇವಸ್ಥಾನದ ವತಿಯಿಂದ ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಕಾಡೂರು- ಕಾಂತಿಲ – ಕುರುಡಪದವು ಕಡೆಯಿಂದ ಬರುವವರು ಕಾಂತಿಲ ರಸ್ತೆಯಲ್ಲಿ ಬಂದು ಕಾಡೂರು ಶಾಲೆಯ ಬಳಿ ಹಾಗೂ ರವಿಚಂದ್ರ ಪದ್ಯಾಣ ಅವರ ಮನೆಯ ಬಳಿ ಪಾರ್ಕಿಂಗ್ ಮಾಡಬೇಕಾಗಿ ವಿನಂತಿ.
ಪೈವಳಿಕೆ- ಬಾಯಾರು ಕಡೆಯಿಂದ ಬರುವವರು ಮುಳಿಗದ್ದೆ- ಪೊನ್ನೆಂಗಳ- ಪದ್ಯಾಣ ರಸ್ತೆಯಲ್ಲಿ ಬಂದು ಅಭಿರಾಮ ಮನೆಯ ಬಳಿ ಗದ್ದೆಯಲ್ಲಿ ವಾಹನ ಪಾರ್ಕಿಂಗ್ ಮಾಡಬೇಕಾಗಿ ವಿನಂತಿ.
ತೀರಾ ಅಶಕ್ತರಾದ ಭಕ್ತಾದಿಗಳನ್ನು ದೇವಸ್ಥಾನದ ಬಳಿ ಇಳಿಸಿ, ವಾಹನವನ್ನು ಪಾರ್ಕಿಂಗ್ ಸ್ಥಳಕ್ಕೆ ಕೊಂಡೊಯ್ಯುವುದು.
ದೇವಸ್ಥಾನದ ಪೂರ್ವಭಾಗದ ರಸ್ತೆಯಲ್ಲಿ ಸೇರಾಜೆ ಮನೆ ಕಡೆ ತಿರುಗಿ ದೇವಸ್ಥಾನದ ಉತ್ತರ ಭಾಗದಲ್ಲಿ ಪಾರ್ಕಿಂಗ್ ಮಾಡಬೇಕು. ಪುನಃ ತೆರಳುವಾಗ ಪಶ್ವಿಮದ ಕಡೆ ತಿರುಗಿ ಕಾಡೂರು ರಸ್ತೆಯಲ್ಲಿ ತೆರಳುವುದು. Two wheelerಗಳಿಗೆ ಇಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇದೆ.
.
| ಮಾರ್ಚ್ 30ರಂದು ಏಕಾದಶ ನದಿಗಳ ಪುಣ್ಯ ತೀರ್ಥಗಳ ಭವ್ಯ ಮೆರವಣಿಗೆ | ಸಂತರು, ಕೇಂದ್ರ ಸಚಿವರು, ಡಿಸಿಎಂ ಸಹಿತ…