ಲೋರೆಟ್ಟೊ ಮಾತಾ ಚರ್ಚ್ ನಲ್ಲಿ ಗರಿಗಳ ಭಾನುವಾರ ಪಾಮ್ ಸಂಡೆ ಯನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಲಾಯಿತು. ಪವಿತ್ರ ವಾರಕ್ಕೆ ಅತ್ಯಂತ ಭಕ್ತಿಪೂರ್ವಕವಾಗಿ ಆರಂಭ ನೀಡಲಾಯಿತು.
ಲೊರೆಟ್ಟೊ ಸೆಂಟ್ರಲ್ ಸ್ಕೂಲ್ ನ ಮೈದಾನದಲ್ಲಿ ಆರಂಭಗೊಂಡ ಪ್ರಾರ್ಥನಾ ವಿಧಿ ಹಾಗೂ ಮೆರವಣಿಗೆಯಲ್ಲಿ ಗರಿಗಳೊಂದಿಗೆ ನೂರಾರು ಭಕ್ತರು, ಮಕ್ಕಳ ಸಹಿತ ಪಾಲ್ಗೊಂಡರು.
ಪ್ರಧಾನ ಧರ್ಮಗುರುಗಳಾಗಿ ಚರ್ಚ್ ಧರ್ಮಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತಾ ಪ್ರಾರ್ಥನಾ ವಿಧಿ ಹಾಗೂ ನೂರಾರು ಭಕ್ತರೊಂದಿಗೆ ಪವಿತ್ರ ಬಲಿಪೂಜೆ ಅರ್ಪಿಸಿದರು.
ಲೊರೆಟ್ಟೊ ಸೆಂಟ್ರಲ್ ಸ್ಕೂಲ್ ಪ್ರಿನ್ಸಿಪಾಲ್ ವಂ ಜೇಸನ್ ಮೊನಿಸ್ ದೇವರ ವಾಕ್ಯದ ಮೇರೆಗೆ ಪ್ರವಚನ ನೀಡಿದರು. ತಪಸ್ಸು ಕಾಲದಲ್ಲಿ ಅತ್ಮ ನವೀಕರಣಗೊಳಿಸಲು 3 ದಿನಗಳ ಧ್ಯಾನಕೂಟ ಆಯೋಜಿಸಲಾಗಿತ್ತು. ಮೇಲುಸ್ತುವಾರಿಯನ್ನು ಚರ್ಚ್ ಪಾಲನಾ ಮಂಡಳಿ ವಹಿಸಿತ್ತು.
| ಮಾರ್ಚ್ 30ರಂದು ಏಕಾದಶ ನದಿಗಳ ಪುಣ್ಯ ತೀರ್ಥಗಳ ಭವ್ಯ ಮೆರವಣಿಗೆ | ಸಂತರು, ಕೇಂದ್ರ ಸಚಿವರು, ಡಿಸಿಎಂ ಸಹಿತ…