ಬಂಟ್ವಾಳ

ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ ಕೆ.ಹರಿಕೃಷ್ಣ ಪುನರೂರು ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ಶುಕ್ರವಾರ ಉದ್ಘಾಟಿಸಿದರು.

 ಮಾತನಾಡಿ, ಇಡೀ ರಾಜ್ಯದಲ್ಲಿ ಕನ್ನಡವನ್ನೇ ಕಲಿಸುವ ಸರಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿಯಲ್ಲಿದ್ದು, ಸರಕಾರ ಅಧ್ಯಾಪಕರ ನೇಮಕವನ್ನು ಮಾಡದೆ, ಮಕ್ಕಳು ಬಾರದಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದವರು ಈ ವೇಳೆ ವಿಷಾದ ವ್ಯಕ್ತಪಡಿಸಿರು.

ಬಳಿಕ ಅಧ್ಯಕ್ಷೀಯ ಭಾಷಣ ಮಾಡಿದ ಸರ್ವಾಧ್ಯಕ್ಷ ಚಿದಂಬರ ಬೈಕಂಪಾಡಿ, ಈಗ ಶಿಕ್ಷಣದ ವ್ಯಾಪಕತೆ ಎಲ್ಲಿಯವರೆಗೆ ಬಂದು ನಿಂತಿದೆ ಎಂದರೆ, ಕನ್ನಡ ಮಾಧ್ಯಮ ಶಾಲೆಗಳನ್ನು ಬೀಗ ಹಾಕುವಷ್ಟರ ಮಟ್ಟಿಗೆ. ಕನ್ನಡ ಶಾಲೆಯಲ್ಲಿ ಕಲಿತರೂ ಉದ್ಯೋಗ ಖಾತ್ರಿ ಎಂಬ ಭರವಸೆಯನ್ನು ಸರಕಾರ ನೀಡಿದರೆ, ಕನ್ನಡ ಶಾಲೆ ಮುಚ್ಚುವ ಪರಿಸ್ಥಿತಿ ಬರಲಾರದು ಎಂದು ಹೇಳಿದರು.

ಜಾಹೀರಾತು

ನಿಮ್ಮದೇ ಧಾಟಿಯಲ್ಲಿ ಸುದ್ದಿ ಬರೆಯಿರಿ: ಒಬ್ಬ ಪತ್ರಕರ್ತರಿದ್ದರೆ ಸಾಕು, ಯಾವ ಭಾಷೆಗೆ ಬೇಕಾದರೂ ಸುದ್ದಿ ಹೋಗುತ್ತದೆ, ಅದೇ ಸುದ್ದಿ, ಅದೇ ಶೀರ್ಷಿಕೆ, ಅದೇ ಚಿತ್ರ ನಿಮ್ಮ ಪತ್ರಿಕೆಯಲ್ಲೂ ಬರುತ್ತದೆ. ಸುದ್ದಿಯನ್ನು ತನ್ನದೇ ದಾಟಿಯಲ್ಲಿ ಬರೆಯುವ ಪತ್ರಕರ್ತರು ಇವತ್ತು ಬೇಕಾಗಿದ್ದಾರೆ ಸಾಹಿತ್ಯ ಸಂರಕ್ಷಣೆಯಲ್ಲಿ ಮಾಧ್ಯಮದ ಹೊಣೆಗಾರಿಕೆ ಹಾಗೂ ಪ್ರಸ್ತುತ ದಿನಗಳಲ್ಲಿ ಪತ್ರಕರ್ತರು ಹೇಗಿರಬೇಕು ಎಂಬ ಕುರಿತು ಚಿದಂಬರ ಬೈಕಂಪಾಡಿ ಹಿರಿಯ ಪತ್ರಕರ್ತರಾಗಿ ಸಲಹೆ ನೀಡಿದರು. ಪ್ರಶಸ್ತಿ, ಸನ್ಮಾನಗಳಿಗೆ ಸರಕಾರಿ ಪತ್ರ, ಶಿಫಾರಸು ವ್ಯವಸ್ಥೆಗಳನ್ನು ಬಿಟ್ಟು, ಪರಿಣತರ ಆಯ್ಕೆ ಸಮಿತಿ ಇರಲಿ. ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಹಾಕುವ ಸಂಪ್ರದಾಯ ಕೈಬಿಡಲು ಒತ್ತಾಯಿಸಿದರು.

ಬಂಟ್ವಾಳದಲ್ಲಿ ಇಂದು ಸಾಹಿತ್ಯ ಸಮ್ಮೇಳನವಾಗುತ್ತಿದ್ದು, ಇಲ್ಲಿ ಸರ್ವಜ್ಞನ ಪೀಠ ಸ್ಥಾಪಿಸುವ ಮೂಲಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ಹೆಸರು ಚಿರಸ್ಥಾಯಿಯಾಗಿಸುವ ಮೂಲಕ ಅವರ ಕೊಡುಗೆ ಸ್ಮರಿಸಬೇಕು ಎಂದು ಚಿದಂಬರ ಬೈಕಂಪಾಡಿ ಪ್ರತಿಪಾದಿಸಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಪ್ರಭಾಕರ ಶಿಶಿಲ ಮಾತನಾಡಿ, ಮಾನವ ಹಕ್ಕುಗಳನ್ನು ಉಳಿಸುವುದೇ ಸಾಹಿತ್ಯದ ಉದ್ದೇಶ. ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ದಿನೇಶ್ ಅವರು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಸಂದೇಶ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಬಿ.ರಘುನಾಥ ಸೋಮಯಾಜಿ, ಕಸಾಪ ದ.ಕ.ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರಾವಳಿ ವಾಚಕಿಯರ ಲೇಖಕಿಯರ ಸಂಘದ ಅಧ್ಯಕ್ಷ ಶಕುಂತಲಾ ಟಿ. ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಜ್ಯೋತಿಷಿ ಚೈತನ್ಯ ಕಲ್ಯಾಣತ್ತಾಯ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ, ಯುಗಪುರುಷ ಕಿನ್ನಿಗೋಳಿಯ ಭುವನಾಭಿರಾಮ ಉಡುಪ, ಸ್ವಾಗತ ಸಮಿತಿ ಸಂಚಾಲಕ ವಿಶ್ವನಾಥ ಬಂಟ್ವಾಳ, ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಜಯಾನಂದ ಪಿ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಜಿಲ್ಲಾ ಕಸಾಪ ಗೌರವ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ವರಿ, ವಿನಯ ಆಚಾರ್ಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಪೂವಪ್ಪ ನೇರಳಕಟ್ಟೆ, ರಾಮಚಂದ್ರ ಪಳ್ಳತ್ತಡ್ಕ, ತಾಲೂಕು ಅಧ್ಯಕ್ಷರಾದ ಚಂದ್ರಶೇಖರ ಪೇರಾಲು, ಡಿ.ಯದುಪತಿ ಗೌಡ, ಮಂಜುನಾಥ ಎಸ್. ರೇವಣ್ಕರ್, ಸೇಸಪ್ಪ ರೈ, ಪುತ್ತೂರು ಉಮೇಶ್ ನಾಯಕ್, ಡಾ. ಧನಂಜಯ ಕುಂಬ್ಳೆ, ಮಿಥುನ್ ಉಡುಪ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ನ್ಯಾಯವಾದಿ ವೈ.ಉಮೇಶ್ ಕುಮಾರ್, ಸ್ವಾಗತ ಸಮಿತಿ ಕಾರ್ಯದರ್ಶಿ ಅಬುಬಕ್ಕರ್ ಅಮ್ಮುಂಜೆ, ಪ್ರಮುಖರಾದ ದೇವಪ್ಪ ಕುಲಾಲ್ ಉಪಸ್ಥಿತರಿದ್ದರು. ನೆನಪಿನ ಸಂಚಿಕೆಯನ್ನು ಅನಿಲ್ ಪಂಡಿತ್ ಬ್ರಹ್ಮಕೂಟ್ಲು ಬಿಡುಗಡೆಗೊಳಿಸಿದರು. ಪತ್ರಕರ್ತ ಸಂದೀಪ್ ಸಾಲ್ಯಾನ್ ಸರ್ವಾಧ್ಯಕ್ಷರ ಪರಿಚಯ ಮಾಡಿದರು. ಜಿಲ್ಲಾ ಗೌರವ ಕಾರ್ಯದರ್ಶಿ ವಿನಯ ಆಚಾರ್ಯ ವಂದಿಸಿದರು. ಉಪನ್ಯಾಸಕ ಡಾ. ಯೋಗೀಶ ಕೈರೋಡಿ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.