ಬಂಟ್ವಾಳ ತಾಲೂಕಿನ ಪದ್ಯಾಣದಲ್ಲಿ ನಡೆಯಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನೆಲೆ ಪುತ್ತೂರಿನಲ್ಲಿ ಹೊರೆಕಾಣಿಕೆ ಸಂಗ್ರಹ ಕಚೇರಿ ಬುಧವಾರ ಉದ್ಘಾಟನೆಗೊಂಡಿತು.
ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆ ಬಳಿ ಇರುವ ಹಿಂದು ಜಾಗರಣಾ ವೇದಿಕೆ ಕಚೇರಿಯನ್ನು ಹೊರೆಕಾಣಿಕೆ ಸಂಗ್ರಹ ಕಚೇರಿಯಾಗಿಸಿದ್ದು, ಹಿರಿಯ ವೈದ್ಯ ಡಾ. ಪ್ರಸಾದ್ ಭಂಡಾರಿ ಉದ್ಘಾಟಿಸಿದರು.
ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ್ ಭಟ್ ಮಾತನಾಡಿ, ಬ್ರಹ್ಮಕಲಶೋತ್ಸವಕ್ಕೆ ದೇವಸ್ಥಾನದ ಸಮಿತಿ ವತಿಯಿಂದ ಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.
ವೈದ್ಯ ಡಾ.ಸುರೇಶ್ ಪುತ್ತೂರಾಯ ಮಾತನಾಡಿ,ಹೊರೆಕಾಣಿಕೆ ಮೆರವಣಿಗೆ ಭವ್ಯವಾಗಿ ನಡೆಯಲಿ ಎಂದು ಆಶಿಸಿದರು.
ಸ್ವಾಗತ ಸಮಿತಿ ಸಂಚಾಲಕ ಉಜ್ವಲ್ ಪ್ರಭು ಮಾತನಾಡಿ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ತನ್ನನ್ನು ಹೊರೆಕಾಣಿಕೆ ಸ್ವಾಗತ ಸಮಿತಿಯ ಸಂಚಾಲಕರನ್ನಾಗಿಸಿ ಜವಾಬ್ದಾರಿ ನೀಡಿದ್ದು, ಅದನ್ನು ಶ್ರದ್ಧೆಯಿಂದ ನಿರ್ವಹಿಸುತ್ತೇನೆ ಎಂದರು.
ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಹೊರಕಾಣಿಕೆ ಸಮಿತಿ ಸಂಚಾಲಕ ದಯಾನಂದ ಶೆಟ್ಟಿ ಉಜಿರೆಮಾರು ಮಾತನಾಡಿ, ಭಗವಂತನ ಸಾನಿಧ್ಯದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದಾಗ ಅದೊಂದು ದೊಡ್ಡ ಶಕ್ತಿಯಾಗುತ್ತದೆ ಎಂದರು, ಶಾರದ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಮುಡಿ ಅಕ್ಕಿಯನ್ನು ನೀಡಿದರು. ಗೋಪಾಲಕೃಷ್ಣ ಹೇರಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಜ ರಾಧಾಕೃಷ್ಣ ಆಳ್ವ, ಡಾ. ಕೃಷ್ಣ ಪ್ರಸನ್ನ, ವಿದ್ಯಾ ಆರ್ ಗೌರಿ, ಹೊರೆ ಕಾಣಿಕೆ ಸಮಿತಿಯ ಅಭಿಜಿತ್ ಕೊಡಿಪ್ಪಾಡಿ, ರಾಜೇಶ್ ರೈ ಪರ್ಪುಂಜ, ಸಂತೋಷ್ ಬೋನಂತಾಯ, ರಾಜೇಶ್ ಬನ್ನೂರು, ಅಜಿತ್ ರೈ ಹೊಸಮನೆ, ರಾಧಾಕೃಷ್ಣ ಬೋರ್ಕರ್, ಆರ್.ಸಿ ನಾರಾಯಣ್, ಶಿವಕುಮಾರ್ ಕಲ್ಲಿಮಾರ್ ಹಾಗೂ ಬ್ರಹ್ಮಲಕಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮ್ ಸುದರ್ಶನ್ ಹೊಸಮೂಲೆ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ, ಸಹಿತ ಹಲವು ಪ್ರಮುಖರು ಹಾಜರಿದ್ದರು.