ಅಬುದಾಬಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಓಪನ್ ಮಾಸ್ಟರ್ಸ್ ಗೇಮ್ಸ್ ನಲ್ಲಿ ಈಜು ಸ್ಪರ್ಧೆಯಲ್ಲಿ ವಿಟ್ಲದ ಶ್ರೀಲಕ್ಷ್ಮೀ ಚಿನ್ನದ ಪದಕ ಪಡೆದಿದ್ದಾರೆ.ಅಲ್ಲದೆ ಎರಡು ಬೆಳ್ಳಿ ,ಒಂದು ಕಂಚಿನ ಪದಕ ಪಡೆದು ವಿಶ್ವ ಮಟ್ಟದಲ್ಲಿ ಅವರ ಪ್ರಥಮ ಸ್ಪರ್ಧೆಯಲ್ಲಿಯೇ ಉತ್ತಮ ಸಾಧನೆ ತೋರಿಸಿರುವುದು ಗಮನಾರ್ಹವಾಗಿದೆ.
ಮೂಲತಃ ವಿಟ್ಲದ ಕೋಟಿಕೆರೆಯ ದಿ.ಗೋಪಾಲ ಸಪಲ್ಯ ಮತ್ತು ಲೀಲಾವತಿ ದಂಪತಿಗಳ ಪುತ್ರಿಯಾಗಿರುವ ಇವರು ವಿಟ್ಲದ ತುಳಸೀದಾಸ ಶೆಣೈ ಮತ್ತು ಉಮೇಶ ಗಾಣಿಗರಿಂದ ತರಬೇತಿ ಪಡೆದು ಪ್ರಾಥಮಿಕ ಶಾಲಾ ಹಂತದಿಂದಲೇ ತಂದೆಯ ಪ್ರೋತ್ಸಾಹದಿಂದ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಹಲವು ಸ್ಪರ್ಧೆಗಳಲ್ಲಿ ಭಾಗಹಿಸಿ ಪದಕ ಪಡೆದಿರುತ್ತಾರೆ.ಪ್ರಸ್ತುತ ಅಮೃತ ಕಾಲೇಜು ಪಡೀಲಿನಲ್ಲಿ ತೃತೀಯ ವರ್ಷದ ವಾಣಿಜ್ಯ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಂಗಳಾದೇವಿ ಕ್ರೀಡಾಂಗಣದ ಈಜುಕೊಳದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗಹಿಸಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಆಕಾಂಕ್ಷೆ ಹೊಂದಿದ್ದಾರೆ.