ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ಬರುವ ಮಾರ್ಚ್ 26,27ಮತ್ತು 28 ರಂದು ಸ್ಪರ್ಶಾ ಕಲಾಮಂದಿರ ಬಿ ಸಿ ರೋಡ್,ಬಂಟ್ವಾಳ ದಲ್ಲಿ ನಡೆಯಲಿದೆ .ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ ಮಾರಾಟ ಮಳಿಗೆಗಳಿಗೆ ಅವಕಾಶವಿದೆ. ಮಳಿಗೆಗಳ ವ್ಯವಸ್ಥೆಗೆ ಮಾರ್ಚ್ 20ರೊಳಗೆ ಸಮ್ಮೇಳ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಅಮ್ಮುಂಜೆ 7619400376. /9449386376 ಸಂಪರ್ಕಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಂ.ಪಿ. ಶ್ರೀನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.