ಸದಾಶಿವ ಶಿಕ್ಷಣ ಪ್ರತಿಷ್ಠಾನದ ಶಿಕ್ಷಣ ಸಂಸ್ಥೆಯಾದ ಬಂಟ್ವಾಳ ತಾಲೂಕಿನ ನೆತ್ತರಕೆರೆ ಸಮೀಪವಿರುವ ಎಡುವೆಂಚರ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರ ಕಚೇರಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಪ್ರಾತಃಕಾಲದಲ್ಲಿ ಗಣಹೋಮ ನೆರವೇರಿಸಿದ ಬಳಿಕ ಸಂಸ್ಥೆಯ ಅಧ್ಯಕ್ಷ ಅಮೃತ್ ರೈ ಹಾಗೂ ಕಾರ್ಯದರ್ಶಿ ರಕ್ಷಿತಾ ಅಮೃತ್ ರೈ ಉಪಸ್ಥಿತಿಯಲ್ಲಿ ಪ್ರಾಂಶುಪಾಲರಾದ ಮಹೇಶ್ ಕೆ. ಎನ್ ರವರು ಔಪಚಾರಿಕವಾಗಿ ಪ್ರಾಂಶುಪಾಲ ಹುದ್ದೆಯನ್ನು ವಹಿಸಿಕೊಂಡರು.
ಅಮೃತ್ ರೈ ಮಾತನಾಡಿ, ಹಲವು ವರ್ಷಗಳ ಬೋಧನಾ ವೃತ್ತಿಯ ಅನುಭವ ಹೊಂದಿರುವ ಮಹೇಶ್ ನಾಯಕತ್ವದಲ್ಲಿ ವಿದ್ಯಾಸಂಸ್ಥೆ ರಾಜ್ಯ -ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಸದಾಶಿವ ಶಿಕ್ಷಣ ಪ್ರತಿಷ್ಠಾನದ ಖಜಾಂಚಿಗಳಾದ ಅಶ್ವಥ್ ರೈ, ಟ್ರಸ್ಟಿಗಳಾದ ಬಿ.ಮೋಹನ್ ಕುಮಾರ್, ಸಮತಾ ಕಿಶೋರ್, ದೀಪಿಕಾ ಸಂದೇಶ್ ಸಂಸ್ಥೆಯ ಹಿತೈಷಿಗಳಾದ ನೀಲವೇಣಿ ಎಸ್. ರೈ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.