ಬಂಟ್ವಾಳ

ಕೈಕುಂಜೆಯ ಮನೆಯಿಂದ 61 ಗ್ರಾಂ ಚಿನ್ನಾಭರಣ ಕಳವು: ಪೊಲೀಸರ ತನಿಖೆ

ಬಂಟ್ವಾಳ: ಬಿ.ಸಿ.ರೋಡಿನ ಕೈಕುಂಜೆ ಎಂಬಲ್ಲಿ ಮನೆಯೊಂದರಿಂದ ಭಾನುವಾರ ಮಧ್ಯರಾತ್ರಿ ಅವಧಿಯಲ್ಲಿ ಚಿನ್ನಾಭರಣ ಕಳವು ಮಾಡಿದ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳರು ಮಧ್ಯರಾತ್ರಿಯಿಂದ ಬೆಳಗಿನ ಅವಧಿಯಲ್ಲಿ ಹಿಂಬದಿ ಬಾಗಿಲನ ಚಿಲಕವನ್ನು ಯಾವುದೋ ಸಾಧನದಿಂದ ಮುರಿದು ಮನೆಯ ಒಳಗೆ ಬಂದು ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಒಟ್ಟು ಚಿನ್ನ 61 ಗ್ರಾಂ ಕಳವಾಗಿದೆ ಎಂದು ಅನಿಷಾ ಎಂಬವರು ದೂರು ನೀಡಿದಂತೆ ಪ್ರಕರಣ ದಾಖಲಾಗಿದೆ. ಘಟನೆ ಬೆಳಗ್ಗೆ ಗೊತ್ತಾಗಿದ್ದು, ಮನೆಯೆಲ್ಲ ಹುಡುಕಾಡಿದ ಬಳಿಕ ಕಳವಾಗಿರಬಹುದು ಎಂಬ ಶಂಕೆಯಿಂದ ಪೊಲೀಸರಿಗೆ ದೂರು ನೀಡಿದಂತೆ ಪ್ರಕರಣ ದಾಖಲಾಗಿದೆ.

ಕಾರ್ಯಕ್ರಮ ಮುಗಿಸಿ ತಾನು ಮನೆಗೆ ಬಂದು ರಾತ್ರಿ 11.50 ಗಂಟೆಯವರೆಗೆ ಇದ್ದು, ನಂತರ ಮನೆಯ ಬಾಗಿಲುಗಳನ್ನು ಹಾಕಿ ಮಲಗಿರುವುದಾಗಿದೆ. ಮಾ.9ರಂದು ಮನೆಯಲ್ಲಿದ್ದ ತನ್ನ ಚಿಕ್ಕಮ್ಮನ ಮಗಳು ಬೆಳಿಗ್ಗೆ 7 ಗಂಟೆಗೆ ಶಾಲೆಗೆ ಹೋಗಿದ್ದು ಅವಳನ್ನು ಚಿಕ್ಕಮ್ಮ ಮನೆಯ ಎದುರಿನ ಬಾಗಿಲು ತೆಗೆದು ಶಾಲೆಗೆ ಕಳುಹಿಸಿರುತ್ತಾರೆ. ತಾಯಿ ಬೆಳಿಗ್ಗೆ 6.30 ಗಂಟೆಗೆ ಎದ್ದು ಮನೆ ಕೆಲಸ ಮಾಡುತ್ತಿದ್ದರು.ತಾನು ಬೆಳಿಗ್ಗೆ 9 ಗಂಟೆಗೆ ಎದ್ದು ಮಗಳನ್ನು ಶಾಲೆಗೆ ಕಳುಹಿಸಿ ಬೆಳಿಗ್ಗೆ 9.30 ಗಂಟೆಗೆ ಮನೆಯ ಸೋಪಾದಲ್ಲಿ ಕುಳಿತುಕೊಂಡಾಗ ಸೋಪಾದಲ್ಲಿ ತನ್ನ ಮಗಳ ಕಿವಿಯ ಚಿನ್ನ ಇಟ್ಟಿರುವ ಖಾಲಿ ಬಾಕ್ಸ್ ಇತ್ತು. ಅದನ್ನು ನೋಡಿದ ತಾನು ತಾಯಿಯಲ್ಲಿ ಈ ಬಾಕ್ಸ್ ನ್ನು ಯಾರು ಇಲ್ಲಿ ಇಟ್ಟಿದ್ದು ಇದರ ಚಿನ್ನ ಎಲ್ಲಿ ಎಂದು ಕೇಳಿದಾಗ ನನಗೆ ಗೊತ್ತಿಲ್ಲ ಎಂದು ಹೇಳಿದ್ದು ಇದರಿಂದ ಗಾಬರಿಗೊಂಡ ತಾನು ಟಿ.ವಿ ಶೋಕೇಸಿನಲ್ಲಿ ಇಟ್ಟಿದ್ದ ಚಿನ್ನವನ್ನು ನೋಡಲು ಹೋದಾಗ ಬಾಕ್ಸ್ ಗಳಲ್ಲಿ ಚಿನ್ನ  ಇಟ್ಟಿದ್ದ  ಬಾಕ್ಸ್ ಗಳು ಖಾಲಿ ಖಾಲಿಯಾಗಿರುತ್ತದೆ. ಒಂದು ಬಾಕ್ಸ್ ನಲ್ಲಿ ಸುಮಾರು 14 ಗ್ರಾಂ ತೂಕದ ಸಪಾಯ ಚಿನ್ನ ನೆಕ್ಲೇಶ್ , ಇನ್ನೊಂದು ಬಾಕ್ಸ್ ನಲ್ಲಿ ಇಟ್ಟಿದ್ದ 28 ಗ್ರಾಂ ತೂಕದ ಬಳೆಗಳು, ಇನ್ನೊಂದು ಬಾಕ್ಸ್ ನಲ್ಲಿ 8 ಗ್ರಾಂ ತೂಕದ ಕರಿಮಣಿ ಸರ, ಇನ್ನೊಂದು ಬಾಕ್ಸ್ ನಲ್ಲಿದ್ದ ಮಗುವಿನ 3 ಗ್ರಾಂ ತೂಕದ ಸ್ಟಡ್ , 8 ಗ್ರಾಂ ತೂಕದ ಒಂದು ಜೊತೆ ಜುಮ್ಕಿ ಕಳವು ಆಗಿರುತ್ತದೆ. ಮನೆಯ ರೂಮಿಗೆ ಹೋದಾಗ ರೂಮಿನ ಡ್ರಾಯರನ್ನು ಎಳೆದು ನೋಡಿದ್ದು ಅಲ್ಲದೆ ಲ್ಯಾಪ್ ಟಾಪ್ ಬ್ಯಾಗನ್ನು ತೆರೆದು ನೋಡಿರುವುದು ಕಂಡು ಬರುತ್ತದೆ. ಈ ಬಗ್ಗೆ ತಾಯಿಯನ್ನು ಕೇಳಿದ್ದು ಗೊತ್ತಿಲ್ಲ ಎಂದು ಹೇಳಿದ್ದು ಮನೆಯ ಹಿಂಬದಿ ಹೋದಾಗ ಹಿಂಬದಿ ಬಾಗಿಲಿನ ಪಕ್ಕದ ಕಿಟಕಿಯ ಚಿಲಕವನ್ನು ತೆರೆದು ಬಾಗಿಲಿನ ಚಿಲಕವನ್ನು ಯಾವುದೋ ಸಾಧನದಿಂದ ಮುರಿದು ಮನೆಯ ಒಳಗೆ ಬಂದು ಕಳವು ಮಾಡಿಕೊಂಡು ಹೋಗಿರುವ ಸಾದ್ಯತೆ ಇರುತ್ತದೆ. ಕಳವಾದ ಒಟ್ಟು ಚಿನ್ನ 61 ಗ್ರಾಂ ಆಗಿದ್ದು ಎಲ್ಲಾ ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ 7,00,000 ಆಗ ಬಹುದು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.