ಮಹಿಳಾ ದಿನಾಚರಣೆ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಬಂಟ್ವಾಳದ ತಾಲೂಕಿನ ಯೋಜನಾ ಕಚೇರಿಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಜ್ಞಾನವಿಕಾಸ ಸೃಜನಶೀಲ ಕಾರ್ಯಕ್ರಮದ ಅಡಿ ಕೇಂದ್ರದ ಸದಸ್ಯರು ಹಾಗೂ ಅವರ ಮನೆಯವರಿಗೆ, ಮದುಮಗಳ ಶೃಂಗಾರ ತರಬೇತಿ ಕಾರ್ಯಕ್ರಮ ಸೋಮವಾರ ಆರಂಭಗೊಂಡಿತು.
ದಕ್ಷಿಣ ಕನ್ನಡ ಜಿಲ್ಲೆ ನಿರ್ದೇಶಕ ದಿನೇಶ್ ಚಾಲನೆ ನೀಡಿ ಮಾತನಾಡಿ, ಜ್ಞಾನವಿಕಾಸ ಕಾರ್ಯಕ್ರಮ ಆರ್ಥಿಕ, ಸಾಮಾಜಿಕ, ಸಬಲೀಕರಣದತ್ತ ಮಹಿಳೆಯರು ಮುಖ್ಯವಾಹಿನಿಗೆ ಬರಲು ಕಾರ್ಯಕ್ರಮ ಉತ್ತಮವಾದದ್ದು, ಏಳು ದಿನದ ತರಬೇತಿಯಲ್ಲಿ ಆಸಕ್ತಿಯಿಂದ ಭಾಗವಹಿಸಿ ಎಂದರು.
ಜ್ಞಾನವಿಕಾಸದ ಯೋಜನಾಧಿಕಾರಿ ಮಲ್ಲಿಕಾ ಪ್ರಾಸ್ತಾವಿಕ ಮಾತನಾಡಿದರು. ತಾಲೂಕಿನ ಯೋಜನಾಧಿಕಾರಿ ಜಯಾನಂದ ಪಿ. ಜನಜಾಗೃತಿ ಸದಸ್ಯರಾದ ಭಾರತಿ ಚೌಟ. ಸದಾನಂದ ಗೌಡ ನಾವೂರು, ತರಬೇತಿ ಶಿಕ್ಷಕಿ ಶೋಭಾ ಉಪಸ್ಥಿತರಿದ್ದರು. ತಾಲೂಕಿನ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸವಿತಾ ಕಾರ್ಯಕ್ರಮ ನಿರ್ವಹಿಸಿದರು.