ಮಧ್ಯಾಹ್ನ ಕಳೆದು ಸಂಜೆ ಸುಮಾರು 4 ಗಂಟೆಯಾಗುತ್ತಲೇ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಬಿ.ಸಿ.ರೋಡ್ ಬ್ಯುಸಿ ರೋಡ್ ಆಗಿ ಬದಲಾಗುತ್ತದೆ. ದಿಢೀರನೆ ವಾಹನಗಳು ಹೆಚ್ಚು ಕಾಣಿಸಿಕೊಂಡು ಸಂಚಾರದಟ್ಟಣೆ ಉಂಟಾಗುತ್ತದೆ. ಯಾಕೆ ಹೀಗಾಗುತ್ತದೆ ಎಂಬುದಕ್ಕೆ ಅಲ್ಲೇ ಉತ್ತರವಿದೆ. ಪರಿಹರಿಸುವವರಿಗೆ ಸಮಯಾವಕಾಶ ಇನ್ನೂ ಸಿಕ್ಕಿಲ್ಲ.
ಸಂಜೆಯಿಂದ ರಾತ್ರಿಯವರೆಗಿನ ಅವಧಿ ಅಂದರೆ ಸುಮಾರು 4ರಿಂದ 7.30ರವರೆಗಿನ ಸಮಯ ವಾಹನಗಳು ವೇಗವಾಗಿ ಸಂಚರಿಸಲು ಆಗದಂಥ ಸ್ಥಿತಿ ನಿರ್ಮಾಣವಾಗುತ್ತದೆ. ಮಂಗಳೂರು ಕಡೆಯಿಂದ ಆಗಮಿಸುವ ವಾಹನಗಳು ನಗರದ ಮೂಲಕ ಹಾದುಹೋಗಲೇಬೇಕಾದ ಅನಿವಾರ್ಯತೆ ಒಂದೆಡೆಯಾದರೆ, ಅಲ್ಲಿ ಹೋಗಲು ಆಗದಂಥ ಪರಿಸ್ಥಿತಿ ಇನ್ನೊಂದೆಡೆ ನಿರ್ಮಾಣವಾಗಿದೆ. ಬೆಂಗಳೂರು ಭಾಗದಿಂದ ಮಂಗಳೂರು ಕಡೆ ತೆರಳುವ ವಾಹನಗಳಿಗೆ ಫ್ಲೈಓವರ್ ಸಂಚಾರದ ಜತೆ ಸರ್ವೀಸ್ ರಸ್ತೆಯೂ ಇರುವ ಕಾರಣ ದೊಡ್ಡ ಸಮಸ್ಯೆ ಇಲ್ಲ. ಆದರೆ ಬಿ.ಸಿ.ರೋಡ್ ಪೇಟೆಯಲ್ಲಿ ಹೆದ್ದಾರಿ ಬದಿಯಲ್ಲಿರುವ ಯಾವುದೇ ಕಟ್ಟಡಗಳಿಗೆ ಸ್ವಂತ ಪಾರ್ಕಿಂಗ್ ವ್ಯವಸ್ಥೆಗಳು ಇಲ್ಲದೇ ಇರುವ ಕಾರಣ, ಅಂಗಡಿ, ಮುಂಗಟ್ಟುಗಳಿಗೆ ವ್ಯವಹಾರಕ್ಕೆಂದು ಬರುವವರು ಹೆದ್ದಾರಿಗೆ ತಾಗಿಕೊಂಡೇ ವಾಹನ ನಿಲ್ಲಿಸುತ್ತಾರೆ. ಕಾರ್ ನಂಥ ವಾಹನಗಳು ರಿವರ್ಸ್ ತೆಗೆಯುವ ಹೊತ್ತಿಗೆ ವಾಹನಗಳ ಸಾಲು ಉದ್ದವಾಗುತ್ತಾ ಹೋಗುತ್ತದೆ.
ಪ್ರತಿ ಬಾರಿ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಗಳಲ್ಲಿ ಪಾರ್ಕಿಂಗ್ ನಂಥ ವಿಷಯಗಳು ಪ್ರಸ್ತಾಪವಾಗಿ ಬಳಿಕ ವಿಷಯಾಂತರವೋ ಅಥವಾ ತಾರ್ಕಿಕ ಅಂತ್ಯ ಕಾಣದೆ ಮುಗಿಯುವುದುಂಟು. ರಸ್ತೆಯಲ್ಲೇ ಬಸ್ ನಿಲ್ಲುವುದು ಶಾಶ್ವತ ಸಮಸ್ಯೆಯಾಗುತ್ತಿದೆಯೋ ಎಂಬ ಭೀತಿ ಬಿ.ಸಿ.ರೋಡಿನ ಜನರದ್ದು. ಮಂಗಳೂರಿನಿಂದ ಬೆಂಗಳೂರು, ಮೈಸೂರು, ಮಡಿಕೇರಿ, ಪುತ್ತೂರು, ಉಪ್ಪಿನಂಗಡಿ, ಧರ್ಮಸ್ಥಳ, ವಿಟ್ಲ ಭಾಗಗಳಿಗೆ ತೆರಳುವ ಸರಕಾರಿ ಮತ್ತು ಖಾಸಗಿ ಬಸ್ಸುಗಳು ಬಿ.ಸಿ.ರೋಡಿನಲ್ಲಿ ಪ್ರಯಾಣಿಕರನ್ನು ಹತ್ತಿಸಲು ಹಾಗೂ ಇಳಿಸಲು ಹೆದ್ದಾರಿಯನ್ನೇ ಆಶ್ರಯಿಸಿವೆ. ಮಾರ್ಗದಲ್ಲೇ ಬಸ್ ನಿಲ್ದಾಣವಾದ ಕಾರಣ ಸಂಜೆಯ ಹೊತ್ತು ಇಲ್ಲಿ ಬ್ಲಾಕ್ ಆಗುತ್ತದೆ. ನಾಲ್ಕೈದು ಬಸ್ ನಿಂತರೆ ಮತ್ತೆ ಟ್ರಾಫಿಕ್ ಜಾಮ್