ಬಂಟ್ವಾಳ ತಾಲೂಕಿನಲ್ಲಿ ಹಿಂದೆ ಇದ್ದ ಪ್ರಸ್ತುತ ಉಳ್ಳಾಲ ತಾಲೂಕಿಗೆ ಸೇರಿದ ಸಜಿಪನಡು ಹಾಗು ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ನೂತನ ಪೊಲೀಸ್ ಠಾಣೆ ಸ್ಥಾಪನೆಯ ಪ್ರಸ್ತಾಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ನಲ್ಲಿ ಮಂಡಿಸಲಾಗಿದೆ. ಇದರೊಂದಿಗೆ ಬಂಟ್ವಾಳ ತಾಲೂಕಿನಲ್ಲಿ ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಪುಂಜಾಲಕಟ್ಟೆ, ವಿಟ್ಲ ಪೊಲೀಸ್ ಠಾಣೆಗಳ ಜತೆಗೆ ಮಾಣಿ ಪೊಲೀಸ್ ಠಾಣೆ ಹೆಚ್ಚುವರಿಯಾಗಿ ಸೇರ್ಪಡೆಯಾಗಿ ತಾಲೂಕಿನಲ್ಲಿ 5 ಹಾಗೂ ತಾಲೂಕು ಒಳಪಡುವ ಗ್ರಾಮಗಳು ಇರುವ 6 ಪೊಲೀಸ್ ಸ್ಟೇಶನ್ ಗಳು ಒಳಪಡುವಂತಾಗುತ್ತದೆ.
ದಕ್ಷಿಣ ಕನ್ನಡ ಪೊಲೀಸ್ ಘಟಕದಲ್ಲಿ ನೂತನವಾಗಿ ಕಾರ್ಯಾರಂಭಗೊಳ್ಳಲಿರುವ 02 ಪೊಲೀಸ್ ಠಾಣೆಗಳ ವ್ಯಾಪ್ತಿ ಪ್ರದೇಶವನ್ನು ಈ ಕೆಳಗಿನಂತೆ ಸಂಯೋಜಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ.ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೀಗ ಈ ಎರಡು ಪೊಲೀಸ್ ಠಾಣೆಗಳನ್ನು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.
ಪ್ರಸ್ತಾವನೆ ಸಲ್ಲಿಸಿದ ಠಾಣೆ ಮತ್ತು ಗ್ರಾಮಗಳು ಇವು:
ಸಜಿಪನಡು ಪೊಲೀಸ್ ಠಾಣೆ: ಮಂಚಿ, ಇರಾ, ಸಜಿಪನಡು, ಸಜಿಪಪಡು, ಚೇಳೂರು, ಬೋಳಂತೂರು, ವೀರಕಂಬ, ಕೊಳ್ನಾಡು, ಸಾಲೆತ್ತೂರು, , ಸಜಿಪಮೂಡ, ಸಜಿಪ ಮುನ್ನೂರು
ಮಾಣಿ ಪೊಲೀಸ್ ಠಾಣೆ:: ಶಂಭೂರು, ಬರಿಮಾರು, ಕಡೆಶೀವಾಲಯ, ನೆಟ್ಲಮಡ್ನೂರು, ಅನಂತಾಡಿ, ಇಡ್ಕಿದು, ಮಾಣಿ, ಪೆರಾಜೇ, ಬಾಳ್ತಿಲ, ಗೋಲ್ತಮಜಲು, ಕೊಡಿಪ್ಪಾಡಿ, ಕಬಕ, ಕೆದಿಲ