ಬಂಟ್ವಾಳ : ಕರ್ನಾಟಕ – ಗೋವಾ ಎನ್.ಪಿ.ಸಿ. ಡೈರೆಕ್ಟೋರೇಟ್ ವತಿಯಿಂದ 2026ರ ದೆಹಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ದೇಶದ ಪ್ರಧಾನಿ ನರೇಂದ್ರ ಮೋದಿ ಭಾಗಿಯಾದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ನೃತ್ಯ ತಂಡದಲ್ಲಿ ಭಾಗವಹಿಸಿ ಪ್ರದರ್ಶನಗೈದು ಪ್ರಥಮ ಸ್ಥಾನ ಗಳಿಸಿರುವ ಪುದು ಗ್ರಾಮದ ನಡುಬೈಲು ದಿ ಕೃಷ್ಣ ಭಟ್ ರ ಮೊಮ್ಮಗಳು, ರವಿರಾಜ್ ಭಟ್ ಹಾಗೂ ಅರ್ಚನಾ ಇವರ ಪುತ್ರಿ ಸಾತ್ವಿಕ ಆರ್ ಭಟ್ ಅವರನ್ನು ಅವರ ಸ್ವಗೃಹದಲ್ಲಿ ಕಲಾ ಸಂಗಮ ನಡುಬೈಲು ಹಾಗೂ ಊರ ನಾಗರಿಕರ ಪರವಾಗಿ ಗೌರವಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಶಕುಂತಲಾ ಭಟ್, ರವಿರಾಜ್ ಭಟ್, ಅರ್ಚನಾ ಭಟ್ , ಬಾಲಸುಬ್ರಮಣ್ಯ ಭಟ್, ಶ್ವೇತಾ ಭಟ್, ಪಿ ಸುಬ್ರಮಣ್ಯ ರಾವ್, ಸುರೇಶ ಪೂಜಾರಿ ನಡುಬೈಲ್, ದಿನೇಶ್ ಶೆಟ್ಟಿ ಕೊಟ್ಟಿಂಜ, ಸಂತೋಷ್ ಕುಲಾಲ್ ನೆತ್ತರಕೆರೆ, ಗಿರೀಶ್ ಶೆಟ್ಟಿ ಕುಂಪನಮಜಲು, ಮನೋಜ್ ಶರ್ಮ, ರವಿ ನಡುಬೈಲು, ಕಿಶೋರ್ ನಡುಬೈಲು, ಮೋಹನದಾಸ, ಸುಮಂತ್, ಪೂರ್ವಿಕ್ ಹಾಗೂ ಕಲಾ ಸಂಗಮದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ: ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮಂಗಳೂರು ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ದಿವ್ಯಾಂಗ ಸಮ್ಮೇಳನ ಬಿ.ಸಿ.ರೋಡಿನ ಡಾ.…