ಮೂಡನಡುಗೋಡು ಗ್ರಾಮ ದೈವಸ್ಥಾನ ಕುಜ್ಲುಬೆಟ್ಟು ದೈವಸ್ಥಾನದಲ್ಲಿ ನೇಮೋತ್ಸವ ಶನಿವಾರ ನಡೆಯಲಿದೆ.
ಬೆಳಿಗ್ಗೆ 9.30ಕ್ಕೆ ಧರ್ಮ ದೈವಗಳ ಭಂಡಾರ ಇಳಿದು, ಪುಣ್ಯಾಹ ವಾಚನ,ನವಕ ಕಲಶ ಪ್ರಧಾನ ಹೋಮ,ಕಲಶಾಭಿಷೇಕ, ಪರ್ವಪೂಜೆ. ನಂತರ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ 2 ಗಂಟೆಗೆ ರಕ್ತೇಶ್ವರಿ, ಮೈಸಂದಾಯ ದೈವಗಳಿಗೆ ನೇಮೋತ್ಸವ, ರಾತ್ರಿ 8ರಿಂದ ಕುಜ್ಲುಬೆಟ್ಟು ಗ್ರಾಮ ದೈವಸ್ಥಾನದಲ್ಲಿ ಗ್ರಾಮ ಧರ್ಮದೈವಗಳಾದ ಕೊಡಮಣಿತ್ತಾಯ, ಪಿಲಿಚಾಮುಂಡಿ, ಅಣ್ಣಪ್ಪ ಪಂಜುರ್ಲಿ, ಕಲ್ಕುಡ -ಕಲ್ಲುರ್ಟಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ.ಈ ಸಂದರ್ಭ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಯವರಿಂದ ದೈವಸ್ಥಾನದ ವಠಾರದಲ್ಲಿ ಅಳವಡಿಸಲಾದ ಸೋಲಾರ್ ಹೈಮಾಸ್ಕ್ ದೀಪ ಲೋಕಾರ್ಪಣೆಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.