ಬಂಟ್ವಾಳ :ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನವೋದಯ ಮಿತ್ರ ಕಲಾ ವೃಂದ (ರಿ.) ಮತ್ತು ನೇತ್ರಾವತಿ ಮಾತೃ ಮಂಡಳಿ, ನೆತ್ತರಕೆರೆ ಇದರ 39ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಫೆ.07ರಂದು ಶನಿವಾರ ನೆತ್ತರಕೆರೆ ಶಾಲಾ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಿತು.
ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಸಂದೇಶ್ ಶೆಟ್ಟಿ ಅರೆಬೆಟ್ಟು ವಹಿಸಿ ಮಾತನಾಡಿ, ಜಗತ್ತಿಗೆ ಶಾಂತಿಯ ಸಂದೇಶ ಕೊಟ್ಟ ದೇಶ ಭಾರತ,ಹಿಂದೂ ಪದ ಕೇವಲ ಧರ್ಮಕ್ಕೆ ಸೀಮಿತವಲ್ಲ ಭಾರತೀಯರೆಲ್ಲರೂ ಹಿಂದೂಗಳು, ನಮ್ಮ ದೇಶ, ಸಮಾಜದೊಟ್ಟಿಗೆ ನಾವು ಇರದಿದ್ದರೆ ಬದುಕು ಸಾರ್ಥಕವಾಗಲಾರದು, ನಮ್ಮ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸಲು ಸಂಘಟನೆ ಅಗತ್ಯ ಎಂದು ಹೇಳಿದರು.
ಮುಖ್ಯ ಅತಿಥಿ ಉದ್ಯಮಿ ಗೋಪಾಲಕೃಷ್ಣ ಶೆಟ್ಟಿ ಕೊಡ್ಮಾಣ್ ಮಾತನಾಡಿ, ಸಮಾಜ ಕಟ್ಟುವ ಕೆಲಸದೊಂದಿಗೆ ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ಮುಂದಿನ ತಲೆಮಾರಿಗೆ ತುಲುಪಿಸುವ ಜವಾಬ್ದಾರಿ ಸಂಘಟನೆಗಳ ಮೇಲಿದೆ, ಸಂಘದ ನಿರಂತರ ಸೇವಾ ಕಾರ್ಯ ಶ್ಲಾಘನೀಯ ಎಂದರು.
ಆಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಮಾತನಾಡಿ ಸಂಘದ ಶಿಸ್ತು ದಕ್ಷತೆ ಸೇವಾಕಾರ್ಯ ಅಭಿನಂದನೀಯ, ಮುಂದಿನದಿನಗಳಲ್ಲಿ ಈ ಸಂಸ್ಥೆಯು ಆಲದ ಮರವಾಗಿ ಎಲ್ಲರಿಗೂ ನೆರಳಾಗಲಿ ಎಂದುಹೇಳಿದರು.
ಸೇವಾ ದಕ್ಷತೆಗೆ ಮುಖ್ಯಮಂತ್ರಿಯಿಂದ ಬಂಗಾರ ಪದಕ ಪಡೆದ ಮಂಗಳೂರು ಸಿಸಿಬಿ ಘಟಕದ ಸುಧೀರ್ ಕುಮಾರ್ ಜಾರಂದಗುಡ್ಡೆ ಇವರನ್ನು ಅಭಿನಂದಿಸಲಾಯಿತು ಬಳಿಕ ಮಾತನಾಡಿದ ಅವರು ಪ್ರಾಮಾಣಿಕ ಪ್ರಯತ್ನಕ್ಕೆ ಫಲ ಖಂಡಿತ ಇದೆ, ಶಿಕ್ಷಣದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಂಡು ಸಮಾಜದಲ್ಲಿ ಉನ್ನತ ಸ್ಥಾನಕ್ಕೆರಲು ಪ್ರಯತ್ನಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೀರ್ತಿಶೇಷ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಸ್ಮರಣಾರ್ಥ ಬಂಟ್ವಾಳ ತಾಲೂಕಿನ ಸರಕಾರಿ ಶಾಲೆಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕದೊಂದಿಗೆ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಲಾಯಿತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು. ಬಾಳಗೋಕುಲದ ಮಾತಾಜಿ ಗೌತಮಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನೆತ್ತರಕೆರೆ ಶಾಲಾ ಮುಖ್ಯ ಶಿಕ್ಷಕಿ ಸೆಲ್ವಿಯಾ ಬ್ರಿಗ್ಸ್, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಗೋಪಾಲ್ ಕುಲಾಲ್ ಗೋವಿಂದೊಟ, ಸಂಘ ಅಧ್ಯಕ್ಷ ಜಗದೀಶ ಎನ್, ಗೌರವಾಧ್ಯಕ್ಷ ಪಿ ಸುಬ್ರಮಣ್ಯ ರಾವ್,ನೇತ್ರಾವತಿ ಮಾತೃ ಮಂಡಳಿಯ ಅಧ್ಯಕ್ಷೆ ಸುಶೀಲ ಶೇಖರ, ಸಂಚಾಲಕಿ ಲಲಿತಾ ಸುಂದರ ಉಪಸ್ಥಿತರಿದ್ದರು.
ನವೋದಯ ಮಿತ್ರಕಲಾ ವೃಂದದ ಉಪಾಧ್ಯಕ್ಷ ಸಂತೋಷ್ ಕುಲಾಲ್ ನೆತ್ತರಕೆರೆ ಸ್ವಾಗತಿಸಿ, ಕಾರ್ಯದರ್ಶಿ ಮಹೇಶ್ ವರದಿ ವಾಚಿಸಿದರು, ಸಂಚಾಲಕ ದಾಮೋದರ ನೆತ್ತರಕೆರೆ ಸನ್ಮಾನಿತರ ಬಗ್ಗೆ ಮಾತನಾಡಿದರು,ಕು ಸಿಂಚನ ಬಹುಮಾನಿತರ ಪಟ್ಟಿ ವಾಚಿಸಿ, ರಂಜಿತ್ ಹಾಗೂ ಕು ಸಿಂಧು ಸನ್ಮಾನಿತರ ಪಟ್ಟಿ ವಾಚಿಸಿದರು ನೇತ್ರಾವತಿ ಮಾತೃ ಮಂಡಳಿಯ ಕೋಶಾಧಿಕಾರಿ ಜಯಂತಿ ವಿಶ್ವನಾಥ ಧನ್ಯವಾದವಿತ್ತು ಕು ವರ್ಷ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ 9ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮದ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.ಸಂಜೆ 7ರಿಂದ ಸಾಂಸ್ಕೃತಿಕ ನೃತ್ಯ ವೈವಿದ್ಯ,ಸಭಾ ಕಾರ್ಯಕ್ರಮ ನಡೆಯಿತು ಬಳಿಕ ಸಂಘದ ಕಲಾವಿದರ ಅಭಿನಯದ “ತಪ್ಪು ಎನ್ಯೂಡ್ಚಿ” ಎಂಬ ತುಳು ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು
| ಬಂಟ್ವಾಳ ತಾಲೂಕಿನ ಡಾಲಿ ಜಾನ್ ಅವರಿಗೆ ಕೃಷಿ ಪಂಡಿತ ಪ್ರಶಸ್ತಿ, ಲೀಲಾ ಗೌಡ ಅವರಿಗೆ ಕೃಷಿ ಪ್ರಶಸ್ತಿ (more…)