ಬಂಟ್ವಾಳ:ಕೇರಳ ರಾಜ್ಯ ಕರ್ನಾಟಕ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕ ಜಯಾನಂದ ಪೆರಾಜೆಯವರಿಗೆ ಕವಿಕಾವ್ಯ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಾಸರಗೋಡು ಕನ್ನಡ ಭವನ ಸಂಸ್ಥಾಪಕ ಡಾ. ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ.
ಕನ್ನಡಭವನದ ಅಂಗ ಸಂಸ್ಥೆಯಾದ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಪ್ರಯುಕ್ತ ಫೆ.22ರಂದು ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯದ ಚುಟುಕು ಯುಗಾಚಾರ್ಯ ಎಂ.ಜಿ.ಆರ್. ಅರಸ್ ವೇದಿಕೆಯಲ್ಲಿ ನಾಡೋಜ ಡಾ.ನೇತ್ರಾಲಯ ಕೃಷ್ಣ ಪ್ರಸಾದ್ ಕೂಡ್ಲು ಸರ್ವಾಧ್ಯಕ್ಷತೆಯಲ್ಲಿ, ಕಾಸರಗೋಡು ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ನಡೆಯಲಿದೆ.