ಬಂಟ್ವಾಳ ತಾಲೂಕು ಪಂಚಾಯತ್ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬಂಟ್ವಾಳ ಮತ್ತು ರುಡ್ ಸೆಟ್ ಸಂಸ್ಥೆ ಉಜಿರೆ ಆಶ್ರಯದಲ್ಲಿ ಪ್ರಾಜೆಕ್ಟ್ ಉನ್ನತಿ ಯೋಜನೆ ಅಡಿ ನರೇಗಾ ಯೋಜನೆಯಲ್ಲಿ 60 ಮಾನವ ದಿನಗಳ ಕೆಲಸ ಪೂರೈಸಿದ ಫಲಾನುಭವಿಗಳಿಗೆ ತರಕಾರಿ ಮತ್ತು ನರ್ಸರಿ ನಿರ್ವಹಣೆ ತರಬೇತಿ ನಡೆಯಿತು.
ಇದರ ಭಾಗವಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಅವರ ಒಡ್ಡೂರು ಫಾರ್ಮ್ ಗೆ ಭೇಟಿ ನೀಡಲಾಯಿತು. ತರಬೇತಿ ಕುರಿತು ಶಿಬಿರಾರ್ಥಿಗಳಿಂದ ಮಾಹಿತಿ ಪಡೆದ ಶಾಸಕರು ತಮ್ಮ ಕೃಷಿ ಜೀವನ ಮತ್ತು ಕೃಷಿಯ ಮಹತ್ವವನ್ನು ತಿಳಿಸಿದರು. ಫಾರ್ಮ್ ಸಿಬ್ಬಂದಿ ಶೀತಲ್ ಅಲ್ಲಿನ ಹೈನುಗಾರಿಕೆ, ಕೃಷಿ ಮತ್ತು ಸಿಎನ್ ಜಿ ಗ್ಯಾಸ್ ಉತ್ಪಾದನೆ, ಜೇನು ಕೃಷಿ ಕುರಿತು ಮಾಹಿತಿ ನೀಡಿದರು. ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಅಜಯ್, ಎನ್ಆರ್‌ಎಲ್ಎಂ ಜಿಲ್ಲಾ ವ್ಯವಸ್ಥಾಪಕರಾದ ಶಕುಂತಲಾ, ತಾಲೂಕು ಎನ್.ಆರ್.ಎಲ್.ಎಂ. ಕಾರ್ಯಕ್ರಮ ವ್ಯವಸ್ಥಾಪಕರಾದ ಸುಧಾ, ಸಂಸ್ಥೆಯ ಸಿಬ್ಬಂದಿ ಕಾಶ್ಮೀರ್ ಡಿಸೋಜ, ತಾಲೂಕು ನರೇಗಾ ಐಇಸಿ ಸಂಯೋಜಕರಾದ ರಾಜೇಶ್ ಹಾಜರಿದ್ದರು.