ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ಚಂದ್ರ ಭೋಸ್ ಅವರೊಂದಿಗೆ ಜೊತೆಯಾಗಿ ಶ್ರಮಿಸಿದ್ದ ಗಾಣಿಗ ಸಮುದಾಯದ ಬ್ಯಾರಿಸ್ಟರ್ ಅತ್ತಾವರ ಎಲ್ಲಪ್ಪ ಅವರ ಪ್ರತಿಮೆ ಮಂಗಳೂರು ನಗರದಲ್ಲಿ ನಿರ್ಮಿಸಲು ಪಕ್ಷಾತೀತವಾಗಿ ಎಲ್ಲರೂಮುಂದಾಗಬೇಕು ಎಂದು ವಿಧಾನಪರಿಷತ್ ಮಾಜಿ ಸಭಾಪತಿ ವಿ. ಆರ್. ಸುದರ್ಶನ್ ಸಲಹೆ ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ಗಾಣಿಗರ ಸೇವಾ ಸಂಘದ ವತಿಯಿಂದ ಗಾಣಿಗ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಸಹಭಾಗಿತ್ವದಲ್ಲಿ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆ ಮೈದಾನದಲ್ಲಿ ಏರ್ಪಡಿಸಿದ್ದ ಕಾಸರಗೋಡು ಮತ್ತು ಉಡುಪಿ ಸಹಿತ ಅವಿಭಜಿತ ಜಿಲ್ಲಾ ಮಟ್ಟದ ‘ಗಾಣಿಗ ಕ್ರೀಡೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ಗಾಣಿಗ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ. ಸಪಲ್ಯ ರಾಯಿ ಇವರು ಕ್ರೀಡೋತ್ಸವ ಉದ್ಘಾಟಿಸಿದರು. ಮಾಜಿ ಸಚಿವ ಬಿ. ರಮಾನಾಥ ರೈ ಅವರು
‘ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ’ ಪುರಸ್ಕೃತ ಬ್ಯಾಡ್ಮಿಂಟನ್ ಆಟಗಾರ್ತಿ ಜಯಲಕ್ಷ್ಮಿ ಗಾಣಿಗ ಕಡೇಶ್ವಾಲ್ಯ ಮತ್ತು ಅಂತರ್ ರಾಷ್ಟ್ರೀಯ ಮಟ್ಟದ ಈಜುಗಾರ್ತಿ ಶ್ರೀ ಲಕ್ಷ್ಮೀ ವಿಟ್ಲ ಅವರನ್ನು ಸನ್ಮಾನಿಸಿದರು.
ಅಖಿಲ ಕರ್ನಾಟಕ ಗಾಣಿಗ ಸಂಘದ ಅಧ್ಯಕ್ಷ ರಾಜಶೇಖರ್ ಗಾಣಿಗ, ರಾಜ್ಯ ಗಾಣಿಗ ಅಭಿವೃದ್ಧಿ ನಿಗಮ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಉದ್ಯಮಿ ಮಾಧವ ಎಸ್. ಮಾವೆ ಶುಭ ಹಾರೈಸಿದರು.
ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮ ಮುಗರೋಡಿ, ಮಂಗಳೂರು ತಾಲೂಕು ಸಂಘದ ಅಧ್ಯಕ್ಷ ರಾಘವ ಪಡೀಲ್, ಪುತ್ತೂರು ಗಾಣಿಗ ಸಂಘದ ಅಧ್ಯಕ್ಷ ಹರಿರಾಮಚಂದ್ರ, ಉಳ್ಳಾಲ ಗಾಣಿಗ ಸಂಘದ ಅಧ್ಯಕ್ಷ ಸುನಿಲ್ ಕುಮಾರ್, ಪುತ್ತೂರು ಯುವ ವೇದಿಕೆ ಅಧ್ಯಕ್ಷ ಪ್ರಸಾದ್ ಪುತ್ತೂರು, ಎಡಪದವು ಸಂಘದ ಅಧ್ಯಕ್ಷ ಭಾಸ್ಕರ್ ಎಡಪದವು, ಬಿಲ್ಲವ ಮಹಾ ಮಂಡಲ ಕೋಶಾಧಿಕಾರಿ ಬೇಬಿ ಕುಂದರ್, ಧಾರ್ಮಿಕ ಸಂಘಟಕ ಜಗನ್ನಾಥ ಬಂಗೇರ ನಿರ್ಮಾಲ್, ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ್ ಆಚಾರ್ಯ, ಉದ್ಯಮಿ ಜನಾರ್ಧನ ಅರ್ಕುಳ, ಶಾಲಾ ಸಂಚಾಲಕ ನರೇಂದ್ರ ಕುಡ್ವ, ಪ್ರಮುಖರಾದ ರತಿಕ ಶ್ರೀನಿವಾಸ್ ಮುಂಬೈ, ಯಜ್ಞೆಶ್ ಬೆಂಗಳೂರು, ವೆಂಕಟೇಶ್ ಅತ್ತಾವರ, ನಾಗೇಶ್ ಕಲ್ಲಡ್ಕ, ಉಮೇಶ್ ಬೋಳಂತೂರು, ಉಮೇಶ್ ನೆಲ್ಲಿಗುಡ್ಡೆ, ಕೃಷ್ಣಪ್ಪ ಬಂಗೇರ, ಪ್ರಕಾಶ್ ಅಡೆಪಿಲ, ವಿಕ್ರಮ್ ಬಂಗೇರ, ಪದ್ಮನಾಭ ಇಡ್ಕಿದು, ಎ ಎಸೈ ಪ್ರವೀಣ್ ವಿಟ್ಲ, ಎ ಎಸೈ ಕರುಣಾಕರ, ಧನುರಾಜ್ ಅತ್ತಾವರ, ಕೃಷ್ಣಪ್ಪ ಕೆಮ್ಮನಾಜೆ, ನಿತ್ಯಾನಂದ ಸಪಲ್ಯ, ಜಯರಾಜ್ ಕರ್ಕೇರ ಮಂಟಮೆ, ನರ್ಸಪ್ಪ ಅಮೀನ್, ವೇದವ ಗಾಣಿಗ, ಯುವ ವೇದಿಕೆ ಅಧ್ಯಕ್ಷ ಭುವನೇಶ್ ಮೊಗರ್ನಾಡ್, ಮಹಿಳಾ ವೇದಿಕೆ ಅಧ್ಯಕ್ಷೆ ಆಶಾ ವೇದವ ಗಾಣಿಗ ಮತ್ತಿತರರು ಇದ್ದರು. ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಭೇಟಿ ನೀಡಿದರು. ಸಂಘದ ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ ಸ್ವಾಗತಿಸಿ, ಸಚಿನ್ ಮೆಲ್ಕಾರ್ ವಂದಿಸಿದರು. ರಿಶಾಂತ್ ತೋಡಾರು ಕಾರ್ಯಕ್ರಮ ನಿರೂಪಿಸಿದರು.