ಬಂಟ್ವಾಳ

ಬದುಕಿನ ಆಧಾರವನ್ನೇ ಸುಟ್ಟುಬೂದಿ ಮಾಡಿದ ಬೆಂಕಿ ಆಕಸ್ಮಿಕ ಘಟನೆ

ಬಂಟ್ವಾಳ: ಬದುಕಿಗೋಸ್ಕರ ಟೈಲರಿಂಗ್ ವೃತ್ತಿ ಮಾಡುತ್ತಾ, ರಾತ್ರಿ ಹಗಲೆನ್ನದೆ ಬಟ್ಟೆ ಹೊಲಿಯುತ್ತಾ, ಸ್ವಾವಲಂಬಿಯಾಗಿ ತನ್ನ ಕಾಲ ಮೇಲೆ ನಿಂತುಕೊಳ್ಳುವ ಹುಮ್ಮಸ್ಸಿನಲ್ಲಿದ್ದ ಈ ಕುಟುಂಬದ ರಕ್ಷಾ ಅವರ ಎರಡು ಟೈಲರಿಂಗ್ ಮೆಶಿನ್ ಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ.

ಬಿ.ಸಿ.ರೋಡಿನ ಗೂಡಿನಬಳಿಯ ಬಳಕ ಎಂಬಲ್ಲಿ ಸೋಮವಾರ ಬೆಳಗ್ಗೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ಅಪಾರ ಪ್ರಮಾಣದ ದಿರಿಸುಗಳನ್ನು ಸುಟ್ಟುಹಾಕಿದ್ದಷ್ಟೇ ಅಲ್ಲ, ಟೈಲರಿಂಗ್ ಮೆಷಿನ್ ನನ್ನೂ ಹೊತ್ತಿಸಿದೆ. ರಕ್ಷಾ ಬಟ್ಟೆ ಹೊಲಿಯುವುದಷ್ಟೇ ಅಲ್ಲ, ಮಾರಾಟವನ್ನೂ ಮಾಡುತ್ತಾ, ಕಷ್ಟಪಟ್ಟು ದುಡಿದು ಪುಟ್ಟ ಬಟ್ಟೆ ಮಳಿಗೆಯನ್ನೂ ಆರಂಭಿಸಿದ್ದರು. ಸಮಾಜದಲ್ಲಿ ಸ್ವಂತ ಕಾಲ ಮೇಲೆ ನಿಲ್ಲುವ ಕನಸುಕಂಗಳ ಯುವತಿಯ ಕನಸಿಗೆ ಅಕ್ಷರಶಃ ಅಗ್ನಿ ಆಕಸ್ಮಿಕ ಕೊಳ್ಳಿ ಇಟ್ಟಂತಾಗಿದ್ದು, ಇದೀಗ ಸಮಾಜದ ಸಹಕಾರ ಅವರಿಗೆ ಬೇಕಾಗಿದೆ. ಚಾರ್ಲಿ ಡಿಸೋಜ ಅವರ ಮಹಡಿ ಮನೆಯಲ್ಲಿ ಬಾಡಿಗೆಗೆ ವಿಜಯ್ ಕುಲಾಲ್ ಮತ್ತು ಕುಟುಂಬ ಇದೆ. ಅವರ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಇದ್ದು, ಹಿಂದೆ ಎಲೆಕ್ಟ್ರಿಶಿಯನ್ ವೃತ್ತಿ ಮಾಡುತ್ತಿದ್ದು, ಪ್ರಸ್ತುತ ಅನಾರೋಗ್ಯದಿಂದ ಮನೆಯಲ್ಲಿದ್ದಾರೆ. ಮೂವರು ಹೆಣ್ಣುಮಕ್ಕಳ ಪೈಕಿ ರಕ್ಷ ಟೈಲರಿಂಗ್ ವೃತ್ತಿ ನಡೆಸುತ್ತಿದ್ದು ಬಿ.ಸಿ.ರೋಡಿನಲ್ಲಿ ಪುಟ್ಟ ಜವಳಿ ಮಳಿಗೆಯನ್ನು ಆರಂಭಿಸಿದ್ದರು. ಬೆಂಕಿ ಆಕಸ್ಮಿಕವಾದಾಗ ವಿಜಯ್ ಹಾಗೂ ಅವರ ಪುತ್ರಿ ರಕ್ಷ ಮನೆಯಲ್ಲಿದ್ದರೆ, ಪತ್ನಿ ಹೊರಗೆ ತೆರಳಿದ್ದರು. ಅವರು ಸಹಾಯಕ್ಕಾಗಿ ಮನೆಯಿಂದ ಹೊರಗೆ ಬಂದ ಸಂದರ್ಭ ಬೆಂಕಿಯನ್ನು ಗಮನಿಸಿದ ಸ್ಥಳೀಯರು ಇಬ್ಬರನ್ನೂ ಮನೆಯಿಂದ ಹೊರಗೆ ಕರೆತಂದಿದ್ದಾರೆ. ಇಲ್ಲದಿದ್ದರೆ ಮತ್ತೊಂದು ಅನಾಹುತವೇ ನಡೆದುಹೋಗುತ್ತಿತ್ತು. ಆದರೆ, ಹೊಲಿಗೆಗೆಂದು ಹಾಗು ಮಾರಾಟಕ್ಕೆಂದು ಇಟ್ಟಿದ್ದ ಬಟ್ಟೆಗಳು, ಉಡುಗೆ, ತೊಡುಗಗೆಗಳು ಅಷ್ಟು ಹೊತ್ತಿನಲ್ಲೇ ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿವೆ.. ಅವರ ಬದುಕಿಗೆ ಆಧಾರವಾಗಿದ್ದ ಎರಡು ಟೈಲರಿಂಗ್ ಮೆಷಿನ್ ಗಳು ಸುಟ್ಟುಹೋಗಿದ್ದು ದುರಂತ.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಬಿ.ವಿ.ಕಾರಂತ ಹುಟ್ಟಿದ ತಾಲೂಕಲ್ಲಿ ಸುಸಜ್ಜಿತ ರಂಗಮಂದಿರವೇ ಇಲ್ಲ

| ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ಪರದಾಟ | ತಾಲೂಕು ಕೇಂದ್ರದಲ್ಲಿ ಜಾಗವೇ ದೊರಕಿಲ್ಲ (more…)

2 hours ago

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

23 hours ago