ಬಿ ವಿ ಕಾರಂತ ರಂಗ ಭೂಮಿಕಾ ಟ್ರಸ್ಟ್ ವತಿಯಿಂದ ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ ಮಂಚಿ ಕುಕ್ಕಾಜೆಯ ಸಿದ್ಧಿ ವಿನಾಯಕ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು.
ಎರಡು ದಿವಸಗಳ ಈ ನಾಟಕೋತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ್ ವಹಿಸಿದ್ದರು. ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ ನ 18 ವರ್ಷಗಳ ಕಾರ್ಯಕ್ರಮಗಳನ್ನು ಶ್ಲಾಘಿಸಿದ ಅವರು, ನಿರಂತರವಾಗಿ ಸಾಗಲಿ ಎಂಬ ಆಶಯ ವ್ಯಕ್ತಪಡಿಸಿದರು. ಬಿ.ವಿ. ಕಾರಂತರಿಗೆ ರಂಗಭೂಮಿ ಮುಖ್ಯವಾಗಿತ್ತು. ಅವರು ಯಾವುದೇ ಸಿದ್ಧಾಂತಕ್ಕೆ ಕಟ್ಟಿಹಾಕಿಕೊಂಡವರಲ್ಲ. ಅವರ ನೆನಪಿಗೆ ಹುಟ್ಟೂರಲ್ಲಿ ನಡೆಸುವ ಈ ನಾಟಕೋತ್ಸವ ಯಶಸ್ವಿ ಆಗಲೆಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ರಂಗನಟ ಮತ್ತು ಪತ್ರಕರ್ತ ರತ್ನದೇವ ಶೆಟ್ಟಿ, ರಂಗ ನಟರಾದ ಸುರೇಶ್ ಕೊಟ್ಟಾರಿ ಉಪಸ್ಥಿತರಿದ್ದು ಉದ್ದೇಶಿಸಿ ಮಾತನಾಡಿ ಪ್ರಸ್ತುತ ರಂಗಭೂಮಿಯ ಸ್ಥಿತಿಗತಿಯನ್ನು ವಿಮರ್ಶಿಸಿದರು. ಟ್ರಸ್ಟಿನ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಮತ್ತು ಉಪಾಧ್ಯಕ್ಷರಾದ ಗಣೇಶ್ ಐತಾಳ್ ಚೌಕದ ಪಾಲು ಉಪಸ್ಥಿತರಿದ್ದರು. ಟ್ರಸ್ಟ್ ನ ಸದಸ್ಯರಾದ ಉಮಾನಾಥ ರೈ ಮೇರಾವು ವಂದಿಸಿದರು. ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.