ಭಂಡಾರಿ ಸಮಾಜ ಸಂಘದ ವಾರ್ಷಿಕ ಮಹಾಸಭೆ ಅಜೆಕಳ ಭಂಡಾರಿ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಸದಾಶಿವ ಭಂಡಾರಿ ನಂದೊಟ್ಟು ಅಧ್ಯಕ್ಷತೆಯಲ್ಲಿ ನಡೆಯಿತು. ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ದೇವರ ಪೂಜೆ ಹಮ್ಮಿ ಕೊಳ್ಳಲಾಗಿತ್ತು.
ಬಳಿಕ ನಡೆದ ಮಹಾಸಭೆಯಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮಣ ಕರಾವಳಿ ಬೆಂಗಳೂರು ಚಾಲನೆ ನೀಡಿದರು.
ಸಮಾಜದ ಮಕ್ಕಳು ಮುಂದಿನ ಭವಿಷ್ಯಕ್ಕಾಗಿ ಐಐಟಿ. ವ್ಯಾಸಂಗ ಮಾಡಬೇಕು ಜೊತೆಗೆ ಯು.ಪಿ.ಎಸ್.ಸಿ. ಪರೀಕ್ಷೆ ಬರೆದು ಸರಕಾರದ ಆಡಳಿತಾತ್ಮಕ ಹುದ್ದೆಗೆ ಆಯ್ಕೆಯಾಗಬೇಕು ಎಂದು ಉದ್ಯಮಿ ಸುರೇಶ್ ಭಂಡಾರಿ ಹಿರೆಬೆಟ್ಟು ಹೇಳಿದರು.
ಸರಕಾರದ ಯೋಜನೆಗಳನ್ನು ಪಡೆದುಕೊಂಡು ಉನ್ನತ ವಿದ್ಯಾಭ್ಯಾಸವನ್ನು ಪಡೆಯಬೇಕು ಹಾಗೂ ಭಂಡಾರಿ ಸಮಾಜವನ್ನು ಸರಕಾರ 2ಎ ನಿಂದ 1ಎಗೆ ವರ್ಗಾಯಿಸಬೇಕು ಎಂದು ನ್ಯಾಯವಾದಿ ಮನೋರಾಜ್ ರಾಜೀವ ಹೇಳಿದರು
ಭಂಡಾರಿ ಮಹಾಮಂಡಲದ ಅಧ್ಯಕ್ಷೆ ಅಮಿತಾ ಗಿರೀಶ್ ಭಂಡಾರಿ, ಹಾಸನ ಡಿಸ್ಟ್ರಿಕ್ಟ್ ಕೋರ್ಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಸೆಕೆಂಡ್ ಆಶಾ ಆನಂದ್, ಮೂಡಬಿದಿರೆ ಆಳ್ವಾಸ್ ನರ್ಸಿಂಗ್ ಕಾಲೇಜು ವೈಸ್ ಪ್ರಿನ್ಸಿಪಾಲ್ ರೇಣುಕಾ ಭಂಡಾರಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ಮುರಳೀಧರ ಭಂಡಾರಿ ಶುಭ ಹಾರೈಸಿದರು.
ಸಂಘದ ಗೌರವ ಅಧ್ಯಕ್ಷ ಗೋಪಾಲ ಭಂಡಾರಿ ಪುಣ್ಕೆದಡಿ, ಭಂಡಾರಿ ಯುವ ವೇದಿಕೆ ಅಧ್ಯಕ್ಷ ಕೇಶವ ಭಂಡಾರಿ, ಮಹಿಳಾ ವೇದಿಕೆ ಅಧ್ಯಕ್ಷೆ ಸುಜಾತ ಜಗದೀಶ್ ಉಪಸ್ಥಿತರಿದ್ದರು
ರಾಜ್ಯ ತೆಂಗಿನನಾರಿನ ಮಹಾಮಂಡಳಿ ಬೆಂಗಳೂರು ದ. ಕ. ಜಿಲ್ಲಾ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾದ ರಾಜ್ ಬಂಟ್ವಾಳ್ ಲಲಿತ ದಂಪತಿ, ರಿತ್ವಿಕ್ ಬಂಟ್ವಾಳ, ಸಚಿನ್ ಮತ್ತು ಹಿರಿಯ ಸದಸ್ಯ ಉಮೇಶ್ ಭಂಡಾರಿ ತುಂಬೆ ಶಿವರಾಮ ಭಂಡಾರಿ ಸರಪಾಡಿ ಅವರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಗೌರವಿಸಲಾಯಿತು. ವೃತ್ತಿ ಸೇವಾಕರ್ತ ವಿಶ್ವನಾಥ ಭಂಡಾರಿ ಪೊಳಲಿ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಸಂಘದ ಕಾರ್ಯದರ್ಶಿ ಹೇಮಚಂದ್ರ ಭಂಡಾರಿ ವಾರ್ಷಿಕ ವರದಿ ವಾಚಿಸಿದರು. ಚಂದ್ರಶೇಖರ ಭಂಡಾರಿ ಲೆಕ್ಕಪತ್ರ ಮಂಡಿಸಿದರು. ಪ್ರೊ. ನಾರಾಯಣ ಭಂಡಾರಿ ಸ್ವಾಗತಿಸಿ ಪ್ರಸ್ತಾವನೆ ನೀಡಿದರು.
ಶ್ರೀಕಾಂತ ಭಂಡಾರಿ ಪಾಣೆಮಂಗಳೂರು ವಂದಿಸಿದರು. ದಿವ್ಯಲತಾ ಭಾಸ್ಕರ್, ಕಾವ್ಯ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.
(more…)