ಅಡಿಕೆ ಬಳಕೆಯಿಂದ ಉಂಟಾಗುತ್ತಿರುವ ಆರೋಗ್ಯ ಮತ್ತು ಸಾಮಾಜಿಕ ಸವಾಲುಗಳ ಕುರಿತು ದಕ್ಷಿಣ-ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಚರ್ಚೆಯ ನಡುವೆ, ವಿಶ್ವ ಆರೋಗ್ಯ ಸಂಸ್ಥೆ ಅಂತರಾಷ್ಟ್ರೀಯ ವೆಬಿನಾರ್ ಆಯೋಜಿಸಿರುವುದು ಕೃಷಿಕರ ಗಮನಕ್ಕೆ ಬಂದಿದೆ. ಅನೇಕ ವರ್ಷಗಳಿಂದ ಏಷ್ಯಾದಾದ್ಯಂತ ಪರಂಪರಾಗತವಾಗಿ ಅಡಿಕೆ ಸೇವಿಸಲಾಗುತ್ತಿದೆ, ಬಳಕೆ ಮಾಡಲಾಗುತ್ತಿದೆ. ಇದುವರೆಗೂ ಕೇವಲ ಅಡಿಕೆ ಸೇವನೆಯಿಂದ ಆರೋಗ್ಯದ ಮೇಲೆ ಹಾನಿಯಾದ ಬಗ್ಗೆ ಗಮನಕ್ಕೆ ಬಂದಿಲ್ಲ. ಇಂದು ಲಕ್ಷಾಂತರ ಸಣ್ಣ ರೈತರಿಗೆ ಆರ್ಥಿಕವಾಗಿ ಅತ್ಯಂತ ಮಹತ್ವಪೂರ್ಣ ಬೆಳೆ ಆಗಿದೆ. ಅಡಿಕೆ ಬೆಳೆಯನ್ನು ಅವಲಂಬಿಸಿ ಪ್ರತ್ಯಕ್ಷವಾಗಿ ಸುಮಾರು 2 ಕೋಟಿ ಕೃಷಿಕರು ಜೀವನ ಸಾಗಿಸುತ್ತಿದ್ದು, ಇದರೊಂದಿಗೆ ಈ ಬೆಳೆಯ ಬೆಳವಣಿಗೆಗೆ 1948 ರಿಂದ ಹಿಡಿದು ಈ ತನಕ ಪ್ರೋತ್ಸಾಹ ನೀಡುತ್ತಾ ಬಂದಿದೆ.ಆದ್ದರಿಂದ ಸರಕಾರಗಳು ಅಡಿಕೆ ನಿಜಕ್ಕೂ ಹಾನಿಕಾರಕವೇ ಎಂಬುದನ್ನು ಅಧ್ಯಯನ ಮಾಡಿ ಒಂದು ತೀರ್ಮಾನ ತೆಗೆದುಕೊಳ್ಳಬೇಕು.ಇಲ್ಲಿ WHO ಹೇಳಿರುವುದನ್ನು ಅಂತಿಮವೆನ್ನಬಾರದು. ಒಂದೊಮ್ಮೆ ಸರಕಾರ ಕಠಿಣ ಕ್ರಮಗಳನ್ನು ತೆಗೆದುಕೊಂಡರೆ ಈ ಕ್ಷೇತ್ರದಲ್ಲಿ ಅನಾಹುತಗಳಾಗಬಹುದು. ಹೀಗಾಗಿ ಈಗ ಅಡಿಕೆಯ ಬಗ್ಗೆ ತಪ್ಪು ಕಲ್ಪನೆ ಬರುವ ಮಾದರಿಯ ಪ್ರಯತ್ನಗಳು ಸರಿಯಲ್ಲ ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರು ಸಂಘ ಅಧ್ಯಕ್ಷ,ಕಾರ್ಯದರ್ಶಿ ಮತ್ತು ಸದಸ್ಯರು ಒತ್ತಾಯಿಸಿದ್ದಾರೆ.
ಅಡಿಕೆಯ ಬಳಕೆಯ ಬಗ್ಗೆ ಅನೇಕ ಸಮಯಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ತಪ್ಪು ಅಭಿಪ್ರಾಯವನ್ನು ಹರಡಲಾಗುತ್ತಿದೆ. ಅಡಿಕೆಯೇ ಹಾನಿಕಾರಕ ಎಂದು ಹೇಳಲಾಗುತ್ತಿದೆ. ವಾಸ್ತವದಲ್ಲಿ ಭಾರತದ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿ ಅಡಿಕೆಯನ್ನು ಸಾವಿರಾರು ವರ್ಷಗಳಿಂದ ಬಳಕೆ ಮಾಡುತ್ತಿದ್ದಾರೆ. ಹೀಗಿರುವಾಗ ಅಡಿಕೆಯ ಕೊನೆಯ ಹಂತದ ಬಳಕೆಯಲ್ಲಿ ಅಡಿಕೆಯ ಜೊತೆ ವಿವಿಧ ವಸ್ತುಗಳ ಸೇರ್ಪಡೆಯ ಬಳಿಕ ಅಧ್ಯಯನ ನಡೆಸಿ ಅಡಿಕೆಯೇ ಹಾನಿಕಾರಕ ಎಂದು ಬಿಂಬಿಸಿ ಇಂದು ಅಡಿಕೆ ನಿಯಂತ್ರಣದ ಬಗ್ಗೆ ಪ್ರಯತ್ನ, ಹೇಳಿಕೆ , ಸಭೆಗಳು ನಡೆಯುತ್ತಿವೆ. ಅಷ್ಟೇ ಅಲ್ಲ, ಅಡಿಕೆಯನ್ನು ಹಾನಿಕಾರಕ ಎಂದು ವರ್ಗೀಕರಿಸಿದೆ ಹಾಗೂ ನಿಯಂತ್ರಣ ಮಾಡಲು ಪ್ರಯತ್ನ ಮಾಡುವುದು ಸರಿಯಲ್ಲ. ಈಗ ಅಡಿಕೆಯ ಬಗ್ಗೆ ಲಭ್ಯ ಇರುವ ಅಧ್ಯಯನಗಳು , ವಿಶ್ಲೇಷಣೆಗಳು ಹಾಗೂ ಇತರ ವೈಜ್ಞಾನಿಕ ಅಂಶಗಳು ಸೀಮಿತವಾಗಿವೆ. ಹೀಗಾಗಿ ಅಡಿಕೆಯನ್ನು ನಿಷೇಧ ಅಥವಾ ತಪ್ಪು ಅಭಿಪ್ರಾಯ ಹರಡುವ ಬದಲಾಗಿ ಅಡಿಕೆಯನ್ನು ಮಾತ್ರವೇ ಸಂಶೋಧನಾ ಆಧಾರಿತ ವರದಿಯನ್ನು ಪಡೆಯಬೇಕು ಹಾಗೂ ಆ ಬಳಿಕವೇ ಯಾವುದೇ ನೀತಿಗಳನ್ನು ರೂಪಿಸಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಒತ್ತಾಯಿಸಿದೆ. ಸರ್ಕಾರವು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಅಡಿಕೆಯ ಪ್ರತ್ಯೇಕವಾದ ಅಧ್ಯಯನವನ್ನು ನಡೆಸಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಹಾಗೂ ಕಾರ್ಯದರ್ಶಿ ವೆಂಕಟಗಿರಿ ಸಿ ವಿ ಹಾಗೂ ಅಡಿಕೆ ಬೆಳೆಗಾರರ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ