ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಆಡಳಿತ ,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ. ದಕ್ಷಿಣ ಕನ್ನಡ ಶಾಖೆ ಮಂಗಳೂರು ಸಂಯುಕ್ತ ಆಶಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ 2025–26 ರ ಅಥ್ಲೆಟಿಕ್ಸ್ ನಲ್ಲಿ ಮೊಂಟೆ ಪದವು ಕೆ ಪಿ ಎಸ್ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ರೋಹಿಣಿ ಬಿ 200 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಮತ್ತು 4× 400 ಮೀ ರಿಲೇ ಯಲ್ಲಿ ಚಿನ್ನದ ಪದಕ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.