ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಆಡಳಿತ ,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ. ದಕ್ಷಿಣ ಕನ್ನಡ ಶಾಖೆ ಮಂಗಳೂರು ಇವರ ಸಂಯುಕ್ತ ಆಶಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ 2025–26 ರ ಈಜು ಸ್ಪರ್ಧೆ ಯ. 100ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ ಮತ್ತು 4× 100 ಫ್ರೀ ಸ್ಟೈಲ್ ರಿಲೇ ಯಲ್ಲಿ ಕಂಚು ಹಾಗೂ 100ಮೀ ಬಟರ್ ಫ್ಲೈ ನಲ್ಲಿ ಚಿನ್ನ ಪಡೆದು ತಾಲೂಕು ಪಂಚಾಯಿತಿ ಬಂಟ್ವಾಳದಲ್ಲಿ ಉದ್ಯೋಗಿ, ಗ್ರಾಪಂ ಕಾರ್ಯದರ್ಶಿ ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಂಗಳ ಈಜು ಕೊಳದ ತರಬೇತುದಾರ ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್ಪೆಕ್ಟರ್ . ಬಿ. ಕೆ. ನಾಯ್ಕ್ ಅವರಿಂದ ತರಬೇತಿ ಪಡೆದಿದ್ದಾರೆ.