ಬಂಟ್ವಾಳದ ಜೈ ತುಲುನಾಡ್ ಘಟಕದಿಂದ ತುಳು ಲಿಪಿ ಅರಿವು ಅಭಿಯಾನ ನಡೆಯುತ್ತಿದ್ದು, ಇದರ ಭಾಗವಾಗಿ ಕಲ್ಲಡ್ಕ ಸಮೀಪ ಕಟ್ಟೆಮಾರ್ ಮಂತ್ರದೇವತೆ ಸಾನಿಧ್ಯದ ವಾರ್ಷಿಕ ಕೋಲ ಸಂದರ್ಭ ತುಳು ಲಿಪಿ ನಾಮಫಲಕ ಕುರಿತು ಮನವಿ ಮಾಡಲಾಯಿತು.
ತುಳುನಾಡಿನ ಮಾತೃಭಾಷೆ ಮತ್ತು ಲಿಪಿಯ ಇತಿಹಾಸವನ್ನು ಯುವ ಸಮುದಾಯಕ್ಕೆ ತಿಳಿಸುತ್ತಿರುವ ಜೈ ತುಲುನಾಡ್ (ರಿ.) ಸಂಘಟನೆಯು ಸುಮಾರು 30,000ಕ್ಕಿಂತ ಹೆಚ್ಚು ಜನರಿಗೆ ತುಳು ಲಿಪಿ ತರಗತಿಗಳ ಮಾಡುವುದರ ಮೂಲಕ ಅರಿವು ಮೂಡಿಸುತ್ತಿದೆ. ಈ ಸಂದರ್ಭ ಕ್ಷೇತ್ರದ ಧರ್ಮದರ್ಶಿಗಳಾದ ಮನೋಜ್ ಕಟ್ಟೆಮಾರ್ ಮೂಲಕ ಕಟ್ಟೆಮಾರ್ ಕ್ಷೇತ್ರದಲ್ಲಿ ತುಳು ಲಿಪಿ ನಾಮಫಲಕ ಸ್ಥಾಪನೆಗೆ ಮನವಿ ಸಲ್ಲಿಸಲಾಯಿತು. ಜೈ ತುಲುನಾಡ್ ಬಂಟ್ವಾಳ ಘಟಕದ ಅಧ್ಯಕ್ಷರಾದ ಕಿಶೋರ್ ಪೂಜಾರಿ, ಜೈ ತುಲುನಾಡ್ ಸಂಘಟನೆಯ ಸಾಂಸ್ಕೃತಿಕ ಅಂಗಸಂಸ್ಥೆ ಸಂಘ ಲೇಲೇಲೇಗದ ಅಧ್ಯಕ್ಷೆ ಪೂರ್ಣಿಮಾ ಬಂಟ್ವಾಳ್, ಬಂಟ್ವಾಳ ಘಟಕದ ಉಪಾಧ್ಯಕ್ಷ ಪ್ರತೀಕ್ ತುಲುವೆ, ಜೊತೆ ಕಾರ್ಯದರ್ಶಿ ರಂಜಿತಾ, ಕೋಶಾಧಿಕಾರಿ ರಕ್ಷಾ, ಸಂಘಟನಾ ಕಾರ್ಯದರ್ಶಿ ತ್ರಿಷಾಲಿ, ಲೇಲೇಲೇಗಾ ಬಂಟ್ವಾಳದ ಮೇಲ್ವಿಚಾರಕ ಜನಾರ್ದನ್ ಪೆರ್ನೆ, ಸದಸ್ಯ ಧೀರಾಜ್, ಕಾರ್ಯಕಾರಿ ಸಮಿತಿ ಸದಸ್ಯ ಮಂಜುನಾಥ್ ಉಪಸ್ಥಿತರಿದ್ದರು.