ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲಡ್ಕ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಮಾಸಿಕ ಸಭೆ, ಘಟಕ ಅಧ್ಯಕ್ಷ ಮಾಧವ ಸಾಲಿಯಾನ್ ಕುದ್ರೆಬೆಟ್ಟು ಅಧ್ಯಕ್ಷತೆಯಲ್ಲಿ ಕಲ್ಲಡ್ಕ ವಲಯ ಕಚೇರಿಯಲ್ಲಿ ಜರಗಿತು.
ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ ಅವರು ಶೌರ್ಯ ತಂಡದ ಎಲ್ಲಾ ಸದಸ್ಯರಿಗೆ ಯೋಜನೆಯಿಂದ ಕೊಡಲ್ಪಟ್ಟ ಶೌರ್ಯ ಬ್ಯಾಗ್ ಹಸ್ತಾಂತರಿಸಿ. ಶೌರ್ಯ ತಂಡದ ಮುಂದಿನ ಕಾರ್ಯಕ್ರಮ, ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಕಲ್ಲಡ್ಕ ವಲಯ ಮೇಲ್ವಿಚಾರಕ ಶುಕಾರಾಜ್, ಘಟಕ ಸಂಯೋಜಕಿ ವಿದ್ಯಾ, ಘಟಕ ಅಧ್ಯಕ್ಷ ಮಾಧವ ಸಾಲಿಯಾನ್, ಸದಸ್ಯರಾದ ಸಂತೋಷ್ ಕುಮಾರ್, ವೆಂಕಪ್ಪ,ಗಣೇಶ, ರವಿಚಂದ್ರ, ಚಿನ್ನಾ, ಧನಂಜಯ, ಸೌಮ್ಯ ತುಳಸಿ ,ರಮೇಶ ಮೊದಲದವರು ಉಪಸ್ಥಿತರಿದ್ದರು.ಘಟಕ ಸಂಯೋಜಕ ವಿದ್ಯಾ ಸಾಗತಿಸಿ, ಸದಸ್ಯ ಸಂತೋಷ್ ಬೊಲ್ಪೊಡಿ ವಂದಿಸಿದರು.