ಬಂಟ್ವಾಳ: ಹುಟ್ಟೂರು ಮಂಚಿಯಲ್ಲಿ ಖ್ಯಾತ ರಂಗಕರ್ಮಿ ಬಿ.ವಿ.ಕಾರಂತ ನೆನಪಿನ ಮಂಚಿ ನಾಟಕೋತ್ಸವ ಜನವರಿ 29ರಿಂದ ಬಿ.ವಿ.ಕಾರಂತ ನೆನಪಿನ ಮಂಚಿ ನಾಟಕೋತ್ಸವ ಜನವರಿ 29ರಿಂದ 30ರವರೆಗೆ ನಡೆಯಲಿದೆ ಎಂದು ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ಹಿರಿಯ ನ್ಯಾಯವಾದಿ ಕಜೆ ರಾಮಚಂದ್ರ ಭಟ್ ತಿಳಿಸಿದ್ದಾರೆ.
ಮಂಚಿ ಕುಕ್ಕಾಜೆಯ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಸಂಜೆ 6ರಿಂದ ಕಾರ್ಯಕ್ರಮಗಳು ನಡೆಯಲಿವೆ. 29ರಂದು ಗುರುವಾರ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಯಕ್ಷರಂಗಾಯಣ ನಿರ್ದೇಶಕ ಬಿ.ಆರ್.ವೆಂಕಟ್ರಮಣ ಐತಾಳ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ ವಹಿಸುವರು. ಅತಿಥಿಗಳಾಗಿ ಪತ್ರಕರ್ತ ಹಾಗೂ ರಂಗನಟ ರತ್ನದೇವ್ ಶೆಟ್ಟಿ ಮತ್ತು ರಂಗಕಲಾವಿದ ಸುರೇಶ್ ಕೊಟ್ಟಾರಿ ಭಾಗವಹಿಸುವರು. ಈ ವೇಳೆ ಕಾರ್ಕಳ ಯಕ್ಷರಂಗಾಯಣ ರೆಪರ್ಟರಿ ಕಲಾವಿದರಿಂದ ಸೋಮಿಯ ಸೌಭಾಗ್ಯ (ಶಿವರಾಮ ಕಾರಂತ ರಚನೆ, ಭಿನ್ನಷಡ್ಜ ಸಂಗೀತ, ಗಣೇಶ್ ಮಂದಾರ್ತಿ ನಿರ್ದೇಶನ) ಪ್ರದರ್ಶನಗೊಳ್ಳುವುದು.
ಶುಕ್ರವಾರ, ಜ.30ರಂದು ಹಿರಿಯ ನ್ಯಾಯವಾದಿ ರಮೇಶ್ ಉಪಾಧ್ಯಾಯ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದ್ದು, ಅಭಿರುಚಿ ಜೋಡುಮಾರ್ಗ ಅಧ್ಯಕ್ಷ ಹಾಗೂ ಉಪನ್ಯಾಸಕ ದಾಮೋದರ್ ಇ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಮತ್ತು ರಮೇಶ್ ರಾವ್ ಪತ್ತುಮುಡಿ ಅತಿಥಿಗಳಾಗಿ ಭಾಗವಹಿಸುವರು. ತೌಫೀಕ್ ಆಲ್ ಹಕೀಮ್ ರಚಿಸಿ ಎಂ.ಎಸ್.ಕೆ.ಪ್ರಭು ಕನ್ನಡಕ್ಕೆ ಅನುವಾದಿಸಿದ ಗುಲಾಮದ ಸ್ವಾತಂತ್ರ್ಯಯಾತ್ರೆ (ಸಂಗೀತ ಭಿನ್ನಷಡ್ಜ, ನಿರ್ದೇಶನ: ಬಿ.ಆರ್. ವೆಂಕಟ್ರಮಣ ಐತಾಳ್) ಕಾರ್ಕಳ ಯಕ್ಷರಂಗಾಯಣ ರೆಪರ್ಟರಿ ಕಲಾವಿದರಿಂದ ಪ್ರದರ್ಶನಗೊಳ್ಳಲಿದೆ.
ಬಂಟ್ವಾಳದ ಹಲವೆಡೆ ಸಂಸಾರ ಜೋಡುಮಾರ್ಗ ತಂಡದಿಂದ ಕಾರ್ಯಕ್ರಮ, ಸಾರ್ವಜನಿಕರಿಗೆ ಮಾಹಿತಿ (more…)