ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜನವರಿ 27 ಮತ್ತು 28ರಂದು ಶ್ರೀ ಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವ / 29ನೇ ’ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಜನವರಿ 27ರಂದು ಜರಗುವ ’ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನವನ್ನು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಉದ್ಘಾಟಿಸಲಿದ್ದು, ಕದ್ರಿ ನವನೀತ ಶೆಟ್ಟಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಾನ್ಯ ವಿಧಾನ ಸಭಾಧ್ಯಕ್ಷರು, ಮಂಗಳೂರು ಶಾಸಕರಾದ ಯು.ಟಿ. ಖಾದರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕ್ಕಾಡು, ಅಲ್ಟ್ರಾಟೆಕ್ ಸಿಮೆಂಟ್ ಪ್ರೈ ಲಿ.ನ ಹಿರಿಯ ಪ್ರಬಂಧಕ ಸದಾನಂದ ಸುಳಾಯ ಬೆಂಗಳೂರು ಭಾಗವಹಿಸಲಿದ್ದಾರೆ. ಬೆಳಿಗ್ಗೆ ಗಂಟೆ ೧೧.೩೦ಕ್ಕೆ ಜರಗುವ ’ರಾಷ್ಟ್ರೀಯತೆ-ದೇಸೀಯತೆ’ ಎಂಬ ವಿಚಾರಗೋಷ್ಠಿಯಲ್ಲಿ ’ಪೇಂಟೆದ ಪೊರ್ಲು’ ವಿಚಾರದ ಬಗ್ಗೆ ಹಿಂದೂ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ, ’ಹಳ್ಳಿದ ತಿರ್ಲ್’ ವಿಚಾರದ ಬಗ್ಗೆ ವಿಜೇತ್ ಶೆಟ್ಟಿ ಮಂಜನಾಡಿ ವಿಚಾರ ಮಂಡಿಸಲಿದ್ದಾರೆ. ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ ೨ ಗಂಟೆಗೆ ಕವಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರಗಲಿದೆ. ಸದಾನಂದ ನಾರಾವಿ, ಪದ್ಮಾವತಿ ಏದಾರು, ಸುಂದರ ಬಾರಡ್ಕ, ವಿಶ್ವನಾಥ ಕುಲಾಲ್ ಮಿತ್ತೂರು, ಶ್ರೀಶಾವಾಸವಿ ತುಳುನಾಡ್, ವಿಷ್ಣುಗುಪ್ತ ಪುಣಚ, ಚೆನ್ನಪ್ಪ ಅಳಿಕೆ, ದಿವಾಕರ ಬಲ್ಲಾಳ್ ಎ.ಬಿ., ಅನಿತಾ ಶೆಟ್ಟಿ ಮೂಡಬಿದಿರೆ, ಬದ್ರುದ್ದೀನ್ ಕೂಳೂರು, ಅಶೋಕ ಎನ್.ಕಡೇಶಿವಾಲಯ, ಉಮೇಶ್ ಶಿರಿಯ, ಪದ್ಮನಾಭ ಪೂಜಾರಿ ಬಂಟ್ವಾಳ, ಪದ್ಮನಾಭ ಸುವರ್ಣ ಮಿಜಾರ್, ಸವಿತಾ ಕರ್ಕೇರ ಕಾವೂರು, ಶಂಕರ ಕುಂಜತ್ತೂರು, ಚೇತನ್ ವರ್ಕಾಡಿ, ಗಣೇಶ ಪ್ರಸಾದ ಪಾಂಡೇಲು, ರವೀಂದ್ರ ಕುಲಾಲ್ ವರ್ಕಾಡಿ, ಅಕ್ಷತಾ ಶೆಟ್ಟಿ ಪಣಿಮಜಲು, ಡಾ. ಸುರೇಶ ನೆಗಳಗುಳಿ, ಪ್ರಶಾಂತ್ ಆಚಾರ್ಯ, ಎಚ್.ಕೆ. ನಯನಾಡು, ಭಾಸ್ಕರ್ ವರ್ಕಾಡಿ, ಶೇಖರ್ ಶೆಟ್ಟಿ ಬಾಯಾರು, ರೇಮಂಡ್ ಡಿಕೂನ ತಾಕೊಡೆ ಮೊದಲಾದ ಕವಿಗಳು ಭಾಗವಹಿಸಲಿದ್ದಾರೆ. ಗೀತಾ ಲಕ್ಷ್ಮೀಶ್ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.
ಅಪರಾಹ್ಣ ಗಂಟೆ ೩.೩೦ಕ್ಕೆ ಜರಗುವ ಸಮಾರೋಪ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರು ಅನುಗ್ರಹ ಸಂದೇಶ ನೀಡಲಿದ್ದು, ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಲಿದ್ದಾರೆ. ಭಾರತೀಯ ಜನತಾ ಪಕ್ಷ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ದುರ್ಗಾಪ್ರಸಾದ್ ರೈ ಕುಂಬ್ರ ಅತಿಥಿಗಳಾಗಿ ಉಪಸ್ಥಿತರಿರುವರು. ಸಮಾರಂಭದಲ್ಲಿ ನಿವೃತ್ತ ಯೋಧರಾದ ಎನ್.ಎಸ್. ಭಂಡಾರಿ ಮಂಗಳೂರು, ಸುಧೀರ್ ಅಮೀನ್, ಮಂಗಳೂರು, ಎ.ಕೆ., ಜಯಚಂದ್ರನ್ ಮಂಗಳೂರು, ರಾಜೇಶ್ ಹೊಳ್ಳ ಮಂಗಳೂರು, ಬಿ.ಎಸ್.ಎಫ್. ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ, ದೀಪಕ್ ಅಡ್ಯಂತಾಯ ಮಂಗಳೂರು, ಶ್ರೀಕಾಂತ್ ಶೆಟ್ಟಿ ಬಾಳ, ವಿಕ್ರಮ್‌ದತ್ತ ಮಂಗಳೂರು, ಸುಧೀರ್ ಪೈ ಮಂಗಳೂರು, ಬಾಲಚಂದ್ರ ಮಂಗಳೂರು, ಅಪ್ಪು ಶೆಟ್ಟಿ ಮಂಗಳೂರು, ದೇವದಾಸ್ ಪೈ ಮಂಗಳೂರು, ಭಗವಾನ್‌ದಾಸ್ ಮಂಗಳೂರು, ಜಯಪ್ರಕಾಶ್ ರೈ ಮಂಗಳೂರು, ಸುಂದರ ಗೌಡ ಕೆ. ನಡುಬೈಲ್, ವಸಂತ ಗೌಡ ದೇವಸ್ಯ, ನಾಗಪ್ಪ ಗೌಡ ಕೇಪುಳು, ಸುಂದರ ಕೆ. ನೈತ್ತಾಡಿ, ಪುರಂದರ ಡಿ. ಚಂದಳಿಕೆ, ಚಂದ್ರಶೇಖರ ಗೌಡ ಎ. ಪಡ್ನೂರು, ವಸಂತಕುಮಾರ್ ಬಿ. ಪುತ್ತೂರು, ಮೋನಪ್ಪ ಪೂಜಾರಿ ಪಾಣೆಮಂಗಳೂರು, ವೆಂಕಪ್ಪ ಗೌಡ ಪುಣಚ, ಬಾಲಕೃಷ್ಣ ಗೌಡ ಮಂಗಲಪದವು, ಚಂದ್ರ ಕೆ. ವಿಟ್ಲ, ಬಾಲಕೃಷ್ಣ ರೈ ಗೊಳ್ತಮಜಲು, ಕುಶಾಲಪ್ಪ ಗೌಡ ವಿಟ್ಲ, ಧನಂಜಯ ಗೌಡ ಮಂಗಲಪದವು, ಎಡ್ವಿನ್ ರಾಡ್ರಿಗಸ್ ವಿಟ್ಲ, ದಾಸಪ್ಪ ಪೂಜಾರಿ ಮಂಗಲಪದವು, ಅಶೋಕ ವಿಟ್ಲ, ಕರಿಬಸಪ್ಪ ಬಿ.ಸಿ.ರೋಡ್, ಐವಾನ್ ಮೆನೆಜಸ್ ಬಿ.ಸಿ.ರೋಡ್ ಇವರುಗಳನ್ನು ’ತುಳುಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸಂಜೆ ಗಂಟೆ ೬ರಿಂದ ಮುಂಬೈ ಉದ್ಯಮಿ ವಾಮಯ್ಯ ಬಿ. ಶೆಟ್ಟಿ ಇವರ ಪ್ರಾಯೋಜಕತ್ವದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಲಿ ಪಾವಂಜೆ ಇವರಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಜನವರಿ ೨೮ರಂದು ಶ್ರೀ ಒಡಿಯೂರು ರಥೋತ್ಸವ:
28ರಂದು ಪ್ರಾತಃಕಾಲ ಶ್ರೀ ದತ್ತಾಂಜನೇಯ ದೇವರಿಗೆ ಬ್ರಹ್ಮಕಲಶಾಭಿಷೇಕ. ಮಹಾಪೂಜೆಯ ಬಳಿಕ ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ನಾಗತಂಬಿಲ. ಬೆಳಿಗ್ಗೆ ಗಂಟೆ ೯ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭ. ೧೧ ಗಂಟೆಗೆ ಪೂಜೆಯ ಮಹಾಮಂಗಳಾರತಿ. ಗಂಟೆ ೧೧.೩೦ರಿಂದ ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಧರ್ಮಸಭೆ. ಸಾಧ್ವಿ ಶ್ರೀ ಮಾತಾನಂದಮಯೀಯವರು ಆಶೀರ್ವಚನ ನೀಡಲಿರುವರು.
ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಯು., ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಪಯ್ಯಡೆ ಇಂಟರ್‌ನ್ಯಾಷನಲ್ ಹೋಟೆಲ್ಸ್ ಪ್ರೈ. ಲಿ., ಮುಂಬೈ ಇದರ ನಿರ್ದೇಶಕ ಡಾ. ಪಿ.ವಿ. ಶೆಟ್ಟಿ, ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈ.ಲಿ.ನ ಆಡಳಿತ ನಿರ್ದೇಶಕ ಶಶಿಧರ ಬಿ. ಶೆಟ್ಟಿ ಬರೋಡ, ವೈದ್ಯ ಸಾಹಿತಿ ಡಾ. ಮುರಲೀಮೋಹನ್ ಚೂಂತಾರು ಮಂಗಳೂರು, ಶಂಕರ್ ಇಲೆಕ್ಟ್ರಿಕಲ್ಸ್ ಸರ್ವಿಸಸ್ ಪ್ರೈ.ಲಿ.ನ ಸಿ.ಎಂ.ಡಿ. ರಾಜೇಶ್ ಶೆಟ್ಟಿ, ವಿದ್ಯಾಪ್ರಭೋದಿನಿ ಪ್ರೌಢಶಾಲೆ ಮತ್ತು ಜ್ಯೂನಿಯರ್ ಕಾಲೇಜು, ಎರ್ಮಾಳ್ ಬಡ, ಉಡುಪಿ ಇದರ ಅಧ್ಯಕ್ಷ, ನವಿಮುಂಬೈ ಮಹಾನಗರ ಪಾಲಿಕೆ ಸದಸ್ಯ ಸುರೇಶ್ ಜಿ. ಶೆಟ್ಟಿ, ಎಸ್.ಎಸ್.ಡಿ.ಸಿ.ಸಿ.ಬ್ಯಾಂಕ್‌ನ ನಿರ್ದೇಶಕ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ತುಳುವರ್ಲ್ಡ್ ಫೌಂಡೇಶನ್, ಅಂತರ್‌ರಾಷ್ಟ್ರೀಯ ತುಳುವ ಮಹಾಸಭೆ, ಮುಂಬೈನ ಪ್ರಧಾನ ಸಂಚಾಲಕ ಮೋರ್ಲ ರತ್ನಾಕರ ಶೆಟ್ಟಿ, ಹೈಟೆಕ್ ಇಲೆಕ್ಟ್ರಿಫಿಕೇಶನ್ ಇಂಜಿನಿಯರಿಂಗ್ ಪ್ರೈ.ಲಿ., ಮುಂಬೈ ಇದರ ಆಡಳಿತ ನಿರ್ದೇಶಕ ರವಿನಾಥ್ ವಿ.ಶೆಟ್ಟಿ ಅಂಕಲೇಶ್ವರ, ಕೇರಳ ಸರಕಾರ ಕೊಲ್ಲಂನ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಜಿತ್‌ಕುಮಾರ್ ಪಂದಳಮ್ ಇವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.ಅಪರಾಹ್ಣ ಘಂಟೆ ೨.೦೦ರಿಂದ: ಆಗಮ ಪೆರ್ಲ ಮತ್ತು ಬಳಗದವರಿಂದ ’ಶಾಸ್ತ್ರೀಯ ಸಂಗೀತ’ರಾತ್ರಿ ಘಂಟೆ ೭.೦೦ರಿಂದ: ಶ್ರೀ ದತ್ತಾಂಜನೇಯ ದೇವರ ವೈಭವೋಪೇತ ರಥಯಾತ್ರೆ – ಶ್ರೀ ಸಂಸ್ಥಾನದಿಂದ ಗ್ರಾಮ ದೈವಸ್ಥಾನ (ಮಿತ್ತನಡ್ಕ) ಭೇಟಿ, ಕನ್ಯಾನ ಪೇಟೆ ಸವಾರಿ, ನಂತರ ಸದ್ಗುರು ಶ್ರೀ ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆಯ ಬಳಿಕ ಶ್ರೀ ಸಂಸ್ಥಾನಕ್ಕೆ ರಥವು ಹಿಂತಿರುಗುವುದು.
ವಿಶೇಷ ಆಕರ್ಷಣೆ : ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳ ವಿವಿಧ ಭಜನ ಮಂಡಳಿಗಳಿಂದ ಕುಣಿತ ಭಜನೆ, ಚೆಂಡೆಮೇಳ, ಸಿಡಿಮದ್ದು ಪ್ರದರ್ಶನ, ಕೀಲುಗೊಂಬೆ ಕುಣಿತ, ತಾಲೀಮು ಪ್ರದರ್ಶನ, ವಿವಿಧ ಆಕರ್ಷಣೀಯ ಟ್ಯಾಬ್ಲೋಗಳು.
ಸಂಜೆ ಘಂಟೆ ೬.೦೦ರಿಂದ: ಕನ್ಯಾನ ಸದ್ಗುರು ನಿತ್ಯಾನಂದ ಸ್ವಾಮಿ ಮಂದಿರದ ಬಳಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ, ಪಾವಂಜೆ ಮೇಳದವರಿಂದ ಶ್ರೀಧರ ಕೆ. ಶೆಟ್ಟಿ ಗುಬ್ಯ ಮೇಗಿನಗುತ್ತು ಪ್ರಾಯೋಜಕತ್ವದಲ್ಲಿ ಯಕ್ಷಗಾನ ಬಯಲಾಟ.
ರಾತ್ರಿ ಮಿತ್ತನಡ್ಕ ಶ್ರೀ ಮಲರಾಯಿ ದೈವಸ್ಥಾನದ ಬಳಿ ಸಾಂಸ್ಕೃತಿಕ ವೈವಿಧ್ಯ, ಕಮ್ಮಾಜೆಯಲ್ಲಿ ಅಮ್ಮಾ ಗ್ರೂಪ್ಸ್‌ನ ವತಿಯಿಂದ ’ಆಂಟಿ ಅಂಕಲ್’ ತುಳು ಹಾಸ್ಯಮಯ ನಾಟಕ ನಡೆಯಲಿದೆ.