ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಕಾಲಾವಧಿ ಜಾತ್ರೆ ಜ.14ರಿಂದ 21ರವರೆಗೆ ನಡೆಯಲಿದೆ. ಜ.14ರಂದು ಬೆಳಗ್ಗೆ ಧ್ವಜಾರೋಹಣ ನಡೆಯಿತು. ಬಳಿಕ ದೈವದ ಭಂಡಾರ ರಾತ್ರಿ ಕ್ಷೇತ್ರಕ್ಕೆ ಆಗಮನ, 15,16, 17ರಂದು ನಿತ್ಯೋತ್ಸವ, 18ರಂದು ಪ್ರತಿಷ್ಠಾ ಮಹೋತ್ಸವ ಅಂಗವಾಗಿ ರುದ್ರಯಾಗ ನಡೆಯುವುದು. ರಾತ್ರಿ 8.30ಕ್ಕೆ ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಆಗಮನ, 9ಕ್ಕೆ ಬಯ್ಯದ ಬಲಿ, 19ರಂದು ಕೆರೆ ಆಯನ, ನಡು ದೀಪೋತ್ಸವ, ರಾತ್ರಿ 8ಕ್ಕೆ ತೆಪ್ಪೋತ್ಸವ, 20ರಂದು ದರ್ಶನ ಬಲಿ, ಹೂತೇರು, 21ರಂದು ಮಹಾರಥೋತ್ಸವ ನಡೆಯುವುದು. 22ರಂದು ಕವಾಟೋದ್ಘಾಟನೆ ನಡೆಯುವುದು. 14ರಿಂದ 22ರವರೆಗೆ ಪ್ರತಿದಿನ ಸಾಂಸ್ಋತಿಕ ಕಾರ್ಯಕ್ರಮ ನಡೆಯುತ್ತದೆ.
ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಧ್ವಜಾರೋಹಣ ನಡೆಯಿತು