ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಮಕರ ಸಂಕ್ರಮಣದಂದು ಹವ್ಯಕ ಮಹಾಮಂಡಲಾಂತರ್ಗತ ಮಂಗಳೂರು ಹೋಬಳಿ ವತಿಯಿಂದ ರವಿ ಗುರುನಮನ ಆದಿತ್ಯ ಹೃದಯ ಸ್ತೋತ್ರ ಪಾರಾಯಣ ಕಾರ್ಯಕ್ರಮ ನಡೆಯಿತು.
ಬುಧವಾರ ವಿಶ್ವಾವಸು ಸಂವತ್ಸರದ ಮಕರ ಸಂಕ್ರಮಣದ ಪುಣ್ಯ ದಿನದಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಡೆದ ಈ ಕಾರ್ಯದಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದರು.
ಶಿವಪ್ರಸಾದ ಅಮೈ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. 24 ಸಾವಿರ ಗಾಯತ್ರಿ ಜಪ, ಹವನ, ಆದಿತ್ಯ ಹೃದಯ ಹವನ, ಸಪ್ತಶತೀ ಪಾರಾಯಣ, ಅರುಣಪ್ರಶ್ನೆ ಪಾರಾಯಣ, ತೃಚಾಕಲ್ಪ ನಮಸ್ಕಾರ, ಅಚ್ಛಿದ್ರಾಶ್ವಮೇಧ ಪಾರಾಯಣ, ವೇದಪಾರಾಯಣ ಈ ವೇಳೆ 200ಕ್ಕೂ ಅಧಿಕ ಸೀಯಾಳಾಭಿಷೇಕ. ನಾಲ್ಕು ಯಾಮ ಪೂಜೆಗಳು, ಕಲಶ ಪೂಜೆ ನಡೆಯಿತು.
ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪ್ಪು, ರವಿ ಗುರುನಮನ ಸಮಿತಿಯ ಪ್ರಧಾನ ಸಂಚಾಲಕರಾದ ಕಾಕುಂಜೆ ರಾಜಶೇಖರ ಭಟ್, ಶ್ರೀ ರಾಮಚಂದ್ರಾಪುರ ಮಠದ ಶ್ರೀ ಚರಣಖಂಡ ಸಂಯೋಜಕ ರಾಘವೇಂದ್ರ ಮಧ್ಯಸ್ಥ, ಮಂಗಳೂರು ಪ್ರಾಂತ ಮೂರು ಮಂಡಲಗಳ ಅಧ್ಯಕ್ಷರಾದ ರಮೇಶ ಸರವು, ಅರವಿಂದ ದರ್ಬೆ, ಬಾಲಸುಬ್ರಹ್ಮಣ್ಯ ಸರ್ಪಮಲೆ, ಶ್ರೀ ಉಮಾಶಿವ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್, ಶ್ರೀರಾಮಚಂದ್ರಾಪುರ ಮಠ ಪೆರಾಜೆ ಕ್ರಿಯಾ ಸಮಿತಿ ಅಧ್ಯಕ್ಷ ಹಾರೆಕೆರೆ ನಾರಾಯಣ ಭಟ್, ಮಹಾಮಂಡಲ ಉಪಾಧ್ಯಕ್ಷ ಶಿವಶಂಕರ ಬೋನಂತಾಯ, ರಾಮಚಂದ್ರಾಪುರ ಮಠದ ಮಾತೃತ್ವಂ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮಹಾಮಂಡಲ ಮಾತೃಪ್ರಧಾನ ದೇವಿಕಾ ಶಾಸ್ತ್ರಿ, ಸೇವಾಪ್ರದಾನ ಕೃಷ್ಣಮೂರ್ತಿ ಮಾಡಾವು, ಗುರುಕುಲ ಪ್ರಕಲ್ಪ ಸಂಯೋಜಕ ಈಶ್ವರ ಪ್ರಸಾದ ಕನ್ಯಾನ, ಸಹಾಯಪ್ರದಾನೆ ವಿದ್ಯಾ ಕೈಲಂಕಜೆ, ಪ್ರಮುಖರಾದ ಉದಯ ಕುಮಾರ್ ಖಂಡಿಗೆ, ಸತ್ಯನಾರಾಯಣ ಮೊಗ್ರ, ಬಾಲ್ಯ ಶಂಕರ ಭಟ್, ಮಹೇಶ್ ಕುದ್ಕುಲ, ಉಮೇಶ್ ಕೋಣೆಮ್ಮೆ, ಸಿ.ವಿ.ಗೋಪಾಲಕೃಷ್ಣ ಭಟ್, ಉದಯಶಂಕರ ನೀರ್ಪಾಜೆ, ಪಿದಮಲೆ ನಾಗರಾಜ ಭಟ್, ಡಾ. ಕಲ್ಲಡ್ಕ ಪ್ರಭಾಕರ ಭಟ್, ಯತಿನ್ ಕುಮಾರ್ ಯೇಳ್ತಿಮಾರ್, ಡಾ. ಕೆ.ಜಿ.ಭಟ್ ಉಪ್ಪಿನಂಗಡಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ರಾಮಕೃಷ್ಣ ಭಟ್ ಕೂಟೇಲು ಸಹಿತ ಹಲವು ಪ್ರಮುಖರು ಭಾಗವಹಿಸಿದರು.