ಭಂಡಾರಿಬೆಟ್ಟು ಶಾಖೆಯ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ ) ಕರ್ನಾಟಕ ನೇತ್ರಾವತಿ ವಲಯ. ಯುವಜನ ವ್ಯಾಯಾಮ ಶಾಲೆ ಭಂಡಾರಿ ಬೆಟ್ಟು ಶಾಖೆ ಆಶ್ರಯದಲ್ಲಿ ಮಾತೃವಂದನಾ, ಮಾತೃಧ್ಯಾನ, ಮಾತೃಭೋಜನ ಕಾರ್ಯಕ್ರಮ ನಡೆಯಿತು.
ಯೋಗ ಬಂಧುಗಳೊಂದಿಗೆ ಅವರ ಮನೆಯ ಸದಸ್ಯರು ಸೇರಿ 200ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಭಾರತೀಯ ಸಂಸ್ಕೃತಿಯಲ್ಲಿ ತಾಯಿಗಿರುವ ಪೂಜ್ಯನೀಯ ಸ್ಥಾನ, ತಾಯಿಯ ಮಹತ್ವ ತ್ಯಾಗ ಪ್ರೀತಿಯ ಬಗ್ಗೆ ಮುಖ್ಯ ಮಾತುಗಾರರಾಗಿ ಆಗಮಿಸಿರುವ ನೇತ್ರಾವತಿ ವಲಯ ಸಂಚಾಲಕಅಶೋಕ್ ಮಂಗಳೂರು ತಿಳಿಸಿದರು.
ಅಧ್ಯಕ್ಷತೆಯನ್ನು ರಕ್ತೇಶ್ವರಿ ಶಾಖೆಯ ಶಿಕ್ಷಕಿ ಮಂಜುಳಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶರ್ಮಿಳ ಜಯ ಪೂಜಾರಿ, ಭಾಗವಹಿಸಿದರು. ಮುಖ್ಯ ಶಿಕ್ಷಕ ನಾರಾಯಣ ಪಾವಂಜೆ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ನಾರಾಯಣ ಅಜೆಕಲ, ಸುರೇಶ್ ರೈ, ನಾರಾಯಣ ಬಂಟ್ವಾಳ ಉಪಸ್ಥಿತರಿದ್ದರು ಮನೋಹರಿ ಕಾರ್ಯಕ್ರಮ ನಿರ್ವಹಿಸಿದರು. ಸುಷ್ಮಾ ವರದಿ ವಾಚಿಸಿದರು. ತುಳಸಿ ಸ್ವಾಗತಿಸಿದರು. ವನಿತಾ ವಂದಿಸಿದರು