???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ಬಂಟ್ವಾಳ: ಪಂಜಿಕಲ್ಲು ಬುಡೋಳಿಯಲ್ಲಿ ನೇತಾಜಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಬಾಲಗೋಕುಲ ಜ್ಞಾನಂಮದಿರ ಉದ್ಘಾಟನೆ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಭಾನುವಾರ ಜ.11ರಂದು ನಡೆಯಲಿದೆ.
ಜಾನಕಿ ಚಾರಿಟೇಬಲ್ ಟ್ರಸ್ಟ್ ಕಾಟಿಪಳ್ಳ, ಹಳೆ ವಿದ್ಯಾರ್ಥಿ ಸಂಘ ಹಾಗೂ ಊರ, ಪರವೂರ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಚಾಲಕ ಧರ್ಮೇಂದ್ರ ಗಣೇಶಪುರ ಕಾಟಿಪಳ್ಳ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 9.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಸಾಧಕರ ಸನ್ಮಾನ ನಡೆಯಲಿದೆ. ಹಲವು ದಾನಿಗಳ ನೆರವಿನಿಂದ ಶಾಲೆ ಇಂದು 4 ಮಕ್ಕಳಿಂದ 50 ಮಕ್ಕಳವರೆಗೆ ಬೆಳೆದಿದೆ. ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ ಸಹಿತ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮುಂದೆ ಶಾಲೆಯಲ್ಲಿ ಆಂಗ್ಲ ಮಾಧ್ಯಮವನ್ನು ಆರಂಭಿಸುವ ನಿಟ್ಟಿನಲ್ಲೂ ಮಾತುಕತೆ ನಡೆದಿದ್ದು, ವಿದ್ಯಾಭಿಮಾನಿಗಳ ಪ್ರೋತ್ಸಾಹದ ಜೊತೆಗೆ ಮಕ್ಕಳನ್ನು ಶಾಲೆಗೆ ಸೇರಿಸಿ, ಪ್ರೋತ್ಸಾಹಿಸಬೇಕಾಗಿ ಕೋರಿದರು.ಅಧ್ಯಕ್ಷ ಸಿಲ್ವೆಸ್ಟರ್ ಫೆರ್ನಾಂಡಿಸ್, ಕಾರ್ಯದರ್ಶಿ ದೇವಪ್ಪ ಕುಲಾಲ್, ಕೋಶಾಧಿಕಾರಿ ಕೇಶವ ಪೂಜಾರಿ, ಟ್ರಸ್ಟಿ ಜಯ ಕುಂದರ್, ಮುಖ್ಯೋಪಾಧ್ಯಾಯ ದೊಡ್ಡಪ್ಪ ಎಚ್. ಉಪಸ್ಥಿತರಿದ್ದರು.