??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ಬಂಟ್ವಾಳದಲ್ಲಿ ಜಿಲ್ಲಾ ಮಟ್ಟದ ಭೀಮ್ ಆರ್ಮಿ ಉದ್ಘಾಟನಾ ಕಾರ್ಯಕ್ರಮ ಜ.11ರಂದು ಬಿ.ಸಿ.ರೋಡಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಮುಖಂಡರಾದ ರಾಜಾ ಚಂಡ್ತಿಮಾರ್ ಹೇಳಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ, ಯುವ ಜನತೆಯ ಏಳಿಗೆಯನ್ನು ಉದ್ದೇಶವಾಗಿಟ್ಟುಕೊಂಡು, ಸಮಾನತೆ, ವೈಜ್ಞಾನಿಕ ಭಾರತ ಕಟ್ಟಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಂದ್ರಶೇಖರ ಆಜಾದ್ ರಾವಣರ ನೇತೃತ್ವದ ಭೀಮ್ ಆರ್ಮಿ (ಭಾರತ ಏಕತಾ ಮಿಷನ್ )ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುವ ಸಲುವಾಗಿ, ಜಾತಿ ಧರ್ಮ ಬೇಧವಿಲ್ಲದೆ ಈ ಸಂಘಟನೆಯನ್ನು ರೂಪಿಸಲಾಗಿದೆ. ಬೆಳಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ರಾಜಗೋಪಾಲ ಡಿ.ಎಸ್. ವಹಿಸುವರು. ಉದ್ಘಾಟನೆಯನ್ನು ನಾಗರಿಕ ಸೇವಾ ಟ್ರಸ್ಟ್ ಗುರುವಾಯನಕೆರೆಯ ಅಧ್ಯಕ್ಷ ಸೋಮನಾಥ ನಾಯಕ್ ನಡೆಸುವರು ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸೋಮನಾಥ, ಅಣ್ಣು ಸಾಧನ, ಸುಂದರ್ ನಿಡ್ಪಳ್ಳಿ, ಸಂತೋಷ್ ಭಂಡಾರಿಬೆಟ್ಟು, ನಾರಾಯಣ ಬೊಂಡಾಲ, ಗಣೇಶ್ ಕಾಯರ್ತಡ್ಕ, ಕೊರಗಪ್ಪ ಕೊಯ್ಲ ಉಪಸ್ಥಿತರಿದ್ದರು.