filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 39;
ಬಿ.ಸಿ.ರೋಡ್ ನ ಜನನಿಬಿಡ ಪ್ರದೇಶದಲ್ಲಿ ಖಾಸಗಿ ಬಸ್ಸೊಂದು ವಾಹನವೊಂದಕ್ಕೆ ಡಿಕ್ಕಿ ಹೊಡೆದದ್ದಲ್ಲದೆ, ರಸ್ತೆ ಸುರಕ್ಷತೆಗೆಂದು ಹಾಕಿದ ರಸ್ತೆ ಬದಿಯ ಕಬ್ಬಿಣದ ಗಾರ್ಡ್ ಗೆ ಗುದ್ದಿ ಆತಂಕ ಮೂಡಿಸಿತು.
ಶುಕ್ರವಾರ ಸಂಜೆಯ ವೇಳೆ ನಡೆದ ಈ ಘಟನೆ ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸಿತು. ಬಿ.ಸಿ.ರೋಡಿನ ಫ್ಲೈಓವರ್ ಅಡಿಭಾಗದಲ್ಲಿ ಮಂಗಳೂರಿನಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಬಸ್ ವೇಗವಾಗಿ ಬರುತ್ತಿದ್ದು, ನೇರವಾಗಿ ವಾಹನವೊಂದಕ್ಕೆ ಗುದ್ದಿದ್ದಲ್ಲದೆ, ತೀರಾ ಎಡಭಾಗಕ್ಕೆ ಚಲಿಸಿ ರಸ್ತೆ ಪಕ್ಕ ಹಾಕಿದ ಕಬ್ಬಿಣದ ಗಾರ್ಡ್ ಗೆ ಗುದ್ದುತ್ತಾ ಹೋಗಿ ನಿಂತಿತು. ಬಸ್ಸಿನಲ್ಲಿದ್ದ ಪ್ರಯಾಣಿಕರು ಆತಂಕದಿಂದ ಹೊರಕ್ಕೆ ಸುರಕ್ಷಿತವಾಗಿ ಬಂದರೆ, ಬ್ರೇಕ್ ಫೈಲ್ ಆಗಿ ಹೀಗಾಯಿತು ಎಂಬ ಮಾತು ಕೇಳಿಬಂತು. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಘಟನೆಗೆ ಕಾರಣವೇನು ಎಂಬ ಕುರಿತು ತನಿಖೆ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಬಸ್ ಚಲಿಸುತ್ತಿದ್ದ ಪ್ರದೇಶದಲ್ಲಿ ಸಾರ್ವಜನಿಕರು ಸಂಚಾರ ಮಾಡುತ್ತಾರೆ. ಆದರೆ ಆ ಹೊತ್ತಿನಲ್ಲಿ ಯಾರೂ ಇರದೇ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿತು.