MEETING
ಪರಿಶಿಷ್ಟ ಜಾತಿ, ಪರಿಶಿಷ್ಟ ಜಾತಿ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷೆ ಪಲ್ಲವಿ ಜಿ. ಅವರು ಕುಂದುಕೊರತೆ ಅಹವಾಲುಗಳನ್ನು ಬಂಟ್ವಾಳ ತಾಪಂ ಸಭಾಂಗಣದಲ್ಲಿ ಬುಧವಾರ ಸಂಜೆ ಸ್ವೀಕರಿಸಿದರು.
ಅಂಬೇಡ್ಕರ್ ವಸತಿ ಶಾಲೆಯ ಕುರಿತು ವಿಶ್ವನಾಥ ಚಂಡ್ತಿಮಾರ್ ಮಾತನಾಡಿ, ಪಾಳು ಬಿದ್ದ ಈ ಶಾಲೆ ಕುರಿತು ಗಂಭೀರವಾಗಿ ಪರಿಗಣಿಸಬೇಕು. ಮೂರು ತಿಂಗಳಿಗೊಮ್ಮೆ ನಡೆಯುವ ಎಸ್.ಸಿ.ಎಸ್.ಟಿ.ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಬೇಕು. ಶಾಸಕಿ ಭಾಗೀರಥಿ ಮುರುಳ್ಯ ಅವರಿಗಾದ ಅವಮಾನ ಕುರಿತು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.ಭೈರ ಸಮುದಾಯದ ಪ್ರತಿನಿಧಿಯಾದ ಜನಾರ್ದನ ಬೋಳಂತೂರು ಮಾತನಾಡಿ, ಹದಿನೆಂಟು ವರ್ಷದಲ್ಲಿ ನಮ್ಮ ಸಮುದಾಯದ ಭೂಮಿಯಿಂದ ವಂಚಿತರಾದವರಿಗೆ ಕೃಷಿ ಮಾಡಲು ಸರಕಾರಿ ಭೂಮಿ ಸಿಗಲಿಲ್ಲ ಎಂದರು.
ಸದಾಶಿವ ಪುದು ಮಾತನಾಡಿ, ಮನೆ ಹಾನಿಯಿಂದ ಸಮಸ್ಯೆಯಾಗಿರುವ ಕುರಿತು ಗಮನ ಸೆಳೆದರು.ನಿಗಮದಿಂದ ೨೦ ಲಕ್ಷ ರೂ ಭೂಮಿ ಖರೀದಿಗೆಂದು ಕೊಡುತ್ತಾರೆ ಆದರೆ ಅರ್ಜಿಗಳೇ ಬಂದಿಲ್ಲ ಎಂದು ಪಲ್ಲವಿ ಹೇಳಿದರು. ಸರಕಾರದ ಹಂತದಲ್ಲಿ ಯಾವುದೇ ವಿಚಾರಗಳು ಬಾಯಿಮಾತಿನಲ್ಲಿ ನಡೆಯುವುದಿಲ್ಲ. ಪತ್ರಗಳಲ್ಲಿ
ಮಹಾಲಿಂಗ ನಾಯ್ಕ್ ಪುಣಚ ಮಾತನಾಡಿ, ಸರಕಾರದ ಯೋಜನೆಗಳು ರಾಜಕೀಯ ಮುಖಾಂತರ ಹೋಗುವ ಕಾರಣ ಅನುದಾನ ಸಿಗಲು ಕಷ್ಟವಾಗುತ್ತದೆ ಎಂದರು.
ನಮ್ಮ ನಿಗಮ ಮೂಲಕ ಅನುಷ್ಠಾನವನ್ನು ನೇರವಾಗಿ ಮಾಡುತ್ತೇವೆ, ಯಾರ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ ಎಂದು ಪಲ್ಲವಿ ಹೇಳಿದರು.ಸರೋಜಿನಿ ಮಾತನಾಡಿ, ಸೌಲಭ್ಯಗಳು ನಮ್ಮ ಸಮುದಾಯದವರಿಗೆ ಸಿಗುವುದಿಲ್ಲ ಎಂದರು.
ಪುಣಚ ಗ್ರಾಮದ ಜಯರಾಮ ಮಾತನಾಡಿ, ಐದು ಮನೆಗಳಿಗೆ ಕಲ್ಲು ಕೋರೆಯಿಂದ ತೊಂದರೆ ಆಗುತ್ತಿದೆ ಎಂದರು.
ಪ್ರೇಮ್ ಕುಮಾರ್ ಮಾತನಾಡಿ, ಮದುವೆಯಾದರೆ ಕೃಷಿ ಭೂಮಿ ಕೊಡ್ತಾರೆ ಎಂದಿದ್ದಾರೆ ಎಂದು ಗಮನ ಸೆಳೆದರು. ಕ್ರಮಬದ್ಧವಾಗಿ ಕೇಳಿದರೆ, ದೊರಕುತ್ತದೆ, ನಿಮ್ಮ ನಂಬರ್ ಅಡ್ರೆಸ್ ಕೊಡಿ, ಈ ಕುರಿತು ಗಮನಹರಿಸುವುದಾಗಿ ಹೇಳಿದರು. ನಮ್ಮ ಊರಿನಲ್ಲಿ ಹುಟ್ಟಿನಿಂದ ಚೆನ್ನದಾಸರು ಇಲ್ಲ ಎಂದು ನಾರಾಯಣ ಪುಂಚಮೆ ಗಮನ ಸೆಳೆದರು. ಸೂಕ್ತ ದಾಖಲಾತಿಗಳನ್ನು ಪಡೆದು ಪರಿಶೀಲಿಸುವುದಾಗಿ ತಿಳಿಸಿದ ಪಲ್ಲವಿ ತಿಳಿಸಿದರು. ಜಂಟಿ ಕಾರ್ಯದರ್ಶಿ ಆನಂದ ಕುಮಾರ್ ಏಕಲವ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಟ್ವಾಳ ತಹಸೀಲ್ದಾರ್ ಮಂಜುನಾಥ್, ಸಹಾಯಕ ನಿರ್ದೇಶಕಿ ವಿನಯಕುಮಾರಿ, ತಾಪಂ ಸಹಾಯಕ ನಿರ್ದೇಶಕ ವಿಶ್ವನಾಥ್ ಹಾಜರಿದ್ದರು
Shop — Bantwalnews.com Click this Link and enjoy shopping at BANTWALNEWS (more…)