ಕೊಪ್ಪಳದ ಗವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವದಲ್ಲಿ ಪ್ರಮುಖ ಸಾಧಕರನ್ನು ಮೇಘಾಲಯದ ರಾಜ್ಯಪಾಲರಾದ ಸಿ .ಎಚ್. ವಿಜಯಶಂಕರ್ ಉಪಸ್ಥಿತಿಯಲ್ಲಿ ಗವಿಸಿದ್ದೇಶ್ವರ ಮಠ ಕೊಪ್ಪಳದ ಪರಮಪೂಜ್ಯ ಸ್ವಾಮೀಜಿಗಳಾದ ಶ್ರೀ ಶ್ರೀಅಭಿನವ ಗವಿಸಿದ್ದೇಶ್ವರ ಸ್ವಾಮಿಜಿ, ಮೂರು ಸಾವಿರ ಮಠದ ಸ್ವಾಮೀಜಿಗಳಾದ ನಿರಂಜನ ಜಗದ್ಗುರು ಡಾ. ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಜಿ, ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಹಾಗೂ ಶ್ರೀ ಶಿವಯೋಗಿಶ್ವರ ಮಹಾಸ್ವಾಮಿಗಳು ಶ್ರೀ ಗುರು ದೇವ ಆಶ್ರಯ ಗುರುದೇವ ಆಶ್ರಮ ಕಾಖಂಡಕಿ ಹಾಗೂ ಇನ್ನಿತರ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.
ದೇಶದಲ್ಲಿ ವಿಶೇಷ ಸಾಧನೆ ಮಾಡಿದ ರಾಜಸ್ಥಾನದ ಪದ್ಮಶ್ರೀ ಪುರಸ್ಕೃತ ಶಾಮ ಸುಂದರ್ ಪಾಲಿವಾಲ್, ಕೇರಳದ ಕೃಷಿ ವಿಜ್ಞಾನಿ ರೀಮಾಬಾಯಿ ಹಾಗೂ ಕರ್ನಾಟಕದಿಂದ ಬಂಟ್ವಾಳ ತಾಲೂಕಿನ ಕರ್ಪೆಯ ಕೆ. ನಾರಾಯಣ್ ನಾಯಕ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
Shop — Bantwalnews.com Click this Link and enjoy shopping at BANTWALNEWS (more…)