ಕರ್ಣಾಟಕ ಬ್ಯಾಂಕ್ ನ ಬಂಟ್ವಾಳಮೂಡ ಶಾಖೆ ವತಿಯಿಂದ 54ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ವಿಮೆ ಕುರಿತು ಗ್ರಾಹಕ ಜಾಗೃತಿ ಹಾಗೂ ಗ್ರಾಹಕರ ಸಮಾವೇಶ ನಡೆಯಿತು.
ಶಾಖಾ ಸಮೂಹ (ಕ್ಲಸ್ಟರ್) ಮುಖ್ಯಸ್ಥ ಲಕ್ಷ್ಮೀನಾರಾಯಣ ಹಾಗೂ ಗ್ರಾಹಕರಾದ ನಿವೃತ್ತ ಶಿಕ್ಷಕ ಸೀತಾರಾಮ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ವೇಳೆ ಪಿಎನ್.ಬಿ.ಮೆಟ್ ಲೈಫ್ ನಿಂದ 22 ಲಕ್ಷ, ಕೆಬಿಎಲ್ ಸುರಕ್ಷಾದ 5 ಲಕ್ಷ ಹಾಗೂ ಪಿಎಂಜೆಜೆವೈನ 2 ಲಕ್ಷ ರೂಪಾಯಿಗಳ ವಿಮೆಯನ್ನು ವಾರೀಸುದಾರರಿಗೆ ಹಸ್ತಾಂತರಿಸಲಾಯಿತು. ಈ ವಿಮೆಗಳ ಮಹತ್ವವನ್ನು ಅಧಿಕಾರಿಗಳು ಗ್ರಾಹಕರಿಗೆ ವಿವರಿಸಿದರು.
ಶಾಖೆಯ ವತಿಯಿಂದ ಪ್ರಸಕ್ತ ತಿಂಗಳು ಸಂದಾಯವಾದ ಸಾಲ, ಮರುಪಾವತಿ ಹಾಗೂ ಠೇವಣಿ, ವಿಮೆಗಳ ಕುರಿತು ಮಾಹಿತಿ ನೀಡಲಾಯಿತು. ಗ್ರಾಹಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಶಾಖಾ ಮ್ಯಾನೇಜರ್ ಅರುಣ್ ಕುಮಾರ್ ರೈ ಉಪಸ್ಥಿತರಿದ್ದರು. ಶಾಖಾ ಸಹಾಯಕ ಮೆನೇಜರ್ ಸುಹಾಸಿನಿ ಹಾಗೂ ಹಿರಿಯ ಸಿಬ್ಬಂದಿ ರವಿಶಂಕರ್ ಕಾರ್ಯಕ್ರಮ ನಿರ್ವಹಿಸಿದರು.