ಬಾರದ ವೇತನ, ಬಂಟ್ವಾಳ ಪುರಸಭೆ ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ
ಬಂಟ್ವಾಳ ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಕಳೆದ ೨ ತಿಂಗಳಿನಿಂದ ವೇತನ ಪಾವತಿಯಾಗದೇ ಇದ್ದು, ವೇತನ ನೀಡುವುದಕ್ಕೆ ಆಗ್ರಹಿಸಿ ಬುಧವಾರ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ಬಂಟ್ವಾಳ ಪುರಸಭೆಯ ಕಚೇರಿ ಹಾಗೂ ಕುಡಿಯುವ ನೀರಿನ ಪೂರೈಕೆಯ ಹಿನ್ನೆಲೆಯಲ್ಲಿ ಸುಮಾರು ೫೮ ಮಂದಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದು, ಪಂಪು ಆಪರೇಟರ್, ದ್ವಿತೀಯ ದರ್ಜೆ ಸಹಾಯಕರು, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ವಾಲ್ವ್ ಮ್ಯಾನ್, ಕ್ಲೀನರ್‍ಸ್, ಲೋಡರ್‍ಸ್, ಗಾರ್ಡನರ್, ಅಕೌಂಟೆಂಟ್ ಮೊದಲಾದ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪುರಸಭೆಯಲ್ಲಿ ಕೆಲವೇ ಮಂದಿ ಕಾಯಂ ಸಿಬಂದಿ ಇರುವುದರಿಂದ ಬಹುತೇಕ ಹುದ್ದೆಗಳು ಹೊರಗುತ್ತಿಗೆ ಸಿಬಂದಿಗಳಿಂದ ತುಂಬಿದೆ. ತಮ್ಮ ನೇಮಕಾತಿ ಸರಿ ಇಲ್ಲದೇ ಇದ್ದರೆ ಪುರಸಭೆ ಇಷ್ಟು ಸಮಯ ದುಡಿಸಿಕೊಂಡದ್ದು ಯಾಕೆ ಎಂದು ಪ್ರಶ್ನಿಸಿರುವ ನೌಕರರು ವೇತನಕ್ಕೆ ಆಗ್ರಹಿಸಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾದರು..
ಮುಖ್ಯಾಧಿಕಾರಿ ಭರವಸೆ:
ಮುಖ್ಯಾಧಿಕಾರಿ ತೀರ್ಥಪ್ರಸಾದ್ ಕೆ.ಬಿ. ಪ್ರತಿಭಟನಾನಿರತರೊಂದಿಗೆ ಮಾತನಾಡಿ, ಜಿಲ್ಲಾಧಿಕಾರಿಯವರಿಗೆ ಪ್ರಸ್ತಾವನೆ ಕಳುಹಿಸಿದ್ದು, ಅವರಿಂದ ಅನುಮೋದನೆ ಪಡೆದುಕೊಂಡ ಕೂಡಲೇ ವೇತನ ಬಾಕಿ ಇರುವವರಿಗೆ ನೀಡುವ ವ್ಯವಸ್ಥೆ ಮಾಡುತ್ತೇನೆ ಹಾಗೂ ಎಲ್ಲರಿಗೂ ವೇತನ ಪಾವತಿಯಾಗುತ್ತದೆ ಎಂದು ಹೇಳಿದರು.
ವೇತನ ಸಿಗದೆ ಪ್ರತಿಭಟನೆ ಕುಳಿತ ನೌಕರರ ಪರವಾಗಿ ಪುರಸಭೆಯ ಮಾಜಿ ಅಧ್ಯಕ್ಷ ರಾಮಕೃಷ್ಣ ಆಳ್ವ, ಮಹಮ್ಮದ್ ಶರೀಫ್, ಹಿರಿಯ ಸದಸ್ಯರಾದ ಎ.ಗೋವಿಂದ ಪ್ರಭು, ಕಳೆದ ಅವಧಿಯಲ್ಲಿ ಸದಸ್ಯರಾಗಿದ್ದ ಗಂಗಾಧರ ಪೂಜಾರಿ, ಹರಿಪ್ರಸಾದ್ ಭಂಡಾರಿಬೆಟ್ಟು, ವಿದ್ಯಾವತಿ ಪ್ರಮೋದ್ ಕುಮಾರ್, ಮೀನಾಕ್ಷಿ ಗೌಡ, ಶಶಿಕಲಾ, ದೇವಕಿ, ರೇಖಾ ಪೈ ಆಗಮಿಸಿಮುಖ್ಯಾಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.
ಅಧಿಕಾರಿಗಳು ಮಾಡಿರುವ ತಪ್ಪಿಗೆ ಕೌನ್ಸಿಲ್ ನ್ನು ಯಾಕೆ ಹೊಣೆಮಾಡುತ್ತೀರಿ ಎಂದು ಮಾಜಿ ಸದಸ್ಯರು, ಅಧ್ಯಕ್ಷರು ಪ್ರಶ್ನಿಸಿದರು. ವೇತನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಪ್ರತಿಭಟನಾನಿರತರಲ್ಲಿ ಈ ವಿಚಾರ ತಿಳಿಸಿ ಪ್ರತಿಭಟನೆ ಹಿಂಪಡೆಯುವಂತೆ ಮುಖ್ಯಾಧಿಕಾರಿ ಮನವಿ ಮಾಡಿಕೊಂಡರು. ವೇತನ ಸಿಗದೆ ಪ್ರತಿಭಟನೆ ಕುಳಿತ ನೌಕರರ ಪರವಾಗಿ ಪುರಸಭೆಯ ಮಾಜಿ ಉಪಾಧ್ಯಕ್ಷರೂ, ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರಾದ ಮೂನಿಷ್ ಅಲಿ ಅವರ ನೇತೃತ್ವ ನಿಯೋಗದಿಂದ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಿಯೋಗದಲ್ಲಿ ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಶಾಹುಲ್ ಹಮೀದ್ ಎಸ್ ಎಚ್, ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಹಾಗೂ ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಳವೂರು ಉಪಸ್ಥಿತರಿದ್ದರು.
Shop — Bantwalnews.com Click this Link and enjoy shopping at BANTWALNEWS (more…)