Shop — Bantwalnews.com Click this Link and enjoy shopping at BANTWALNEWS
ಸರಕಾರಿ ಶಾಲೆಗಳು ನಮಗೆ ಜೀವನಪಾಠ ಕಲಿಸುತ್ತದೆ. ಇವುಗಳನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಪದ್ಮಶ್ರೀ ಪುರಸ್ಕೃತ ಅಕ್ಷರಸಂತ ಹರೇಕಳ ಹಾಜಬ್ಬ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅಂಚನ್ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಭಾ ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು, ಶಾಲೆ ಪರವಾಗಿ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.
ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ವಿದ್ಯಾಕುಮಾರಿ, ಹಾಗೂ ಐ ಆರ್ ಟಿ ಸುರೇಖಾ ಇಲಾಖೆ ಪರವಾಗಿ ಶುಭ ಹಾರೈಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಮಮತಾ ಸಂತೋಷ್, ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಶಾಲೆಗೆ ನೀಡಿದ ಅನುದಾನದ ಬಗ್ಗೆ ಮಾಹಿತಿ ನೀಡಿದರು.
ತಾಪಂನ 3 ಲಕ್ಷ ರೂ ಅನುದಾನದಿಂದ ನಿರ್ಮಾಣಗೊಂಡ ವಿಶೇಷಚೇತನ ಮಕ್ಕಳ ಶೌಚಾಲಯ ಉದ್ಘಾಟಿಸಲಾಯಿತು. ಗ್ರಾಪಂ ಉಪಾಧ್ಯಕ್ಷೆ ಮೋಹಿನಿ ವಾಮನ ಕುಲಾಲ್ ನಾಟಿ, ಪಂಚಾಯತ್ ಸದಸ್ಯರುಗಳಾದ ಪ್ರಕಾಶ್ ಮಡಿಮುಗೇರ್, ಸುರೇಖಾ, ಉದ್ಯಮಿ ಪದ್ಮನಾಭ ಮಯ್ಯ, ಶ್ರೀ ಕೋದಂಡರಾಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಕೃಷ್ಣಪ್ಪ ನಾಟಿ, ಹರೀಶ್ ಕೇದ್ದೆಲ್, ಉದಯ್ ಕುಮಾರ್ ಶೆಟ್ಟಿ ಹೊಸಲಚ್ಚಿಲ್ ಉಪಸ್ಥಿತರಿದ್ದರು.
ಸಂಜೆ ಶಾಲಾ ಪೂರ್ವ ಪ್ರಾಥಮಿಕ ತರಗತಿಗಳ ಹಾಗೂ ಒಂದರಿಂದ ಏಳನೇ ತರಗತಿವರೆಗಿನ ಕನ್ನಡ ಹಾಗೂ ಆಂಗ್ಲ ಮಾಧ್ಯಮ ತರಗತಿಗಳ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಕೃಷ್ಣಪ್ಪ ಬಂಬಿಲ ಸವಣೂರು ನಿರ್ದೇಶನದಲ್ಲಿ ಮಕ್ಕಳ ಕಿರು ನಾಟಕ “ಬಂಗಾರದ ಮೀನು” ಪ್ರದರ್ಶನಗೊಂಡಿತು.
ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ವಹಿಸಿದ್ದರು.
ರೋಟರಿ ಕ್ಲಬ್ ಮಾಜಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತ ವೀರಕಂಬ ಮಜಿ ಶಾಲಾ ಶಿಕ್ಷಕಿ ಸಂಗೀತ ಶರ್ಮ ಶುಭ ಹಾರೈಸಿದರು.
ಗ್ರಾಮ ಪಂಚಾಯತ್ ಸದಸ್ಯೆ ವಿನೀತಾ ಪುರುಷೋತ್ತಮ, ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿಯಮಿತ ಶಂಭೂರು ಅಧ್ಯಕ್ಷ ಪುರುಷೋತ್ತಮ ಸಾಲಿಯನ್, ಉದ್ಯಮಿ ಉಮೇಶ್ ಬೋಳಂತೂರು, ಅಮೆಚೂರ್ ಕಬಡ್ಡಿ ತೀರ್ಪುಗಾರರ ಮಂಡಳಿ ಅಧ್ಯಕ್ಷ ಸುರೇಶ್ ಮೈರಡ್ಕ, ಉದ್ಯಮಿ ಪ್ರಕಾಶ್ ವಾಸ್, ಭಯಂಕೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಉಮೇಶ್ ನೆಲ್ಲಿಗುಡ್ಡೆ, ಉದ್ಯಮಿ ಸನತ್ ರಕ್ಷಾ ಕೆದ್ದೇಲ್, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಿ ಪ್ರಕಾಶ್, ತಾಯಂದಿರಿ ಸಮಿತಿ ಅಧ್ಯಕ್ಷ ಉಷಾಲಾಕ್ಷಿ ಉಪಸ್ಥಿತರಿದ್ದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಅಂಚನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಸುಜಾತ ಎ ಎಸ್ ಶಾಲಾ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕಿ ವಿಲ್ಮಾ ಪ್ರೆಸಿಲ್ಲಾ ಪಿಂಟೋ ವಂದಿಸಿದರು. ಶಿಕ್ಷಕಿಯರಾದ ದೀಪಿಕಾ ಶೆಟ್ಟಿ ಹಾಗೂ ಶೋಭಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಪ್ರವೀಣ ಕುಮಾರಿ,ಸುಜಾತ, ನತಲಿಯಾ ಸಿಂತಿಯಾ ಮಿನೇಜಸ್,ದಿವ್ಯಶ್ರೀ ಕೆ ಎಸ್, ಪೂಜಾ,ಮಹೇಶ್ವರಿ,ಹರಿಣಾಕ್ಷಿ,ಅನಿತಾ,ಭವಾನಿ, ಯಮುನಾ, ದಿವ್ಯಶ್ರೀ ,ಸುನಿತಾ, ನಿಶಾ, ಕೃತಿ, ಕ್ಷಮಾ ಪ್ರಿಂಟರ್ ಮಿಥುನ್, ಶಾಲಾಭಿವೃದ್ಧಿ ಹಾಗೂ ತಾಯಂದಿರ ಸಮಿತಿಯ ಸದಸ್ಯರುಗಳು ಸಹಕರಿಸಿದರು.
Buy Now At Offer Price!!