ಭಾವೀ ಪರ್ಯಾಯ ಶ್ರೀಗಳಾದ ಶಿರೂರು ಮಠದ ಶ್ರೀ ವೇದವರ್ಧನ ಶ್ರೀಪಾದಂಗಳವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದರು. ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ವಿದ್ಯಾರ್ಥಿಗಳ ದೈನಂದಿನ ಪ್ರಾರ್ಥನೆಯಾದ ಸರಸ್ವತಿ ವಂದನೆಯನ್ನು ವೀಕ್ಷಿಸಿ “ಶರೀರವು ಇರುವುದು ಪರೋಪಕಾರಕ್ಕಾಗಿ ನಾವು ಕಲಿತಿರುವ ವಿದ್ಯೆಯನ್ನು ದೇಶಕ್ಕೆ ಪ್ರೇರಕವಾಗುವಂತೆ ಮಾಡಬೇಕು, ಸಂಸ್ಕಾರ ಮತ್ತು ಗುಣಗಳಿಂದ ದೇಶವನ್ನು ಕಟ್ಟಲು ವಿದ್ಯೆ ಅಗತ್ಯವಾಗಿದೆ” ಎಂದು ಆಶೀರ್ವಚನ ಮಾಡಿದರು.
ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾಗಿರುವ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹಾಗೂ ವಿದ್ಯಾಕೇಂದ್ರದ ಸಂಚಾಲಕರಾಗಿರುವ ವಸಂತ ಮಾಧವ , ಆಡಳಿತ ಮಂಡಳಿಯ ಸದಸ್ಯರಾದ ಪದ್ಮನಾಭ ಕೊಟ್ಟಾರಿ, ಮುರಳಿಧರ, ಡಾ. ಕಮಲ ಪ್ರಭಾಕರ್ ಭಟ್, ಕೃಷ್ಣಪ್ರಸಾದ್ ಕಾಯರ್‌ಕಟ್ಟೆ,ಸೂರ್ಯನಾರಾಯಣ ಭಟ್ ಕಶೆಕೋಡಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 1300ಕ್ಕೂ ಅಧಿಕ ಸದಸ್ಯರಿರುವ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ನ ದಕ್ಷಿಣ ಕನ್ನಡ…