ಶ್ರೀಕೃಷ್ಣ ಮಂದಿರದ ೨೬ನೇ ವಾರ್ಷಿಕೋತ್ಸವದ ನಿಮಿತ್ತ ಅನಂತರಾಮ ಐತಾಳ್ ಓಣಿಬೈಲ್ ನೇತೃತ್ವದಲ್ಲಿ ಬೆಳಿಗ್ಗೆ ಗಣಹೋಮ, ಸಾರ್ವಜನಿಕ ಸತ್ಯನಾರಾಯಣ ಪೂಜೆ ನೆರವೇರಿತು. ನಂತರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಕಮಲಾದೇವಿ ಪ್ರಸಾದ್ ಅಸ್ರಣ್ಣ ಆಶೀರ್ವಚನ ನೀಡಿದರು.
ಪಾವಂಜೆ ಮೇಳದ ಯಕ್ಷಗಾನ ಕಲಾವಿದರಾದ ದಿನೇಶ್ ಶೆಟ್ಟಿ ಕಾವಳಕಟ್ಟೆ ಧಾರ್ಮಿಕ ಉಪನ್ಯಾಸವನ್ನು ಮಾಡಿದರು.
ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕ ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷ ಪ್ರಸನ್ನಕುಮಾರ್ ಮಾರ್ತಾ ವಹಿಸಿದ್ದರು.
ಉದ್ಯಮಿ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು. ಉದ್ಯಮಿ ಕಿಶೋರ್ ಕುಮಾರ್ ಕಟ್ಟೆಮಾರ್ ಉಪಸ್ಥಿತರಿದ್ದರು.
ಆಮ್ಟೂರು ಗ್ರಾಮದ ರಾಷ್ಟ್ರಮಟ್ಟದ ಸಾಧಕ ವಿದ್ಯಾರ್ಥಿಗಳಾದ ಕಬಡ್ಡಿಯ ವಿವಿಧ ವಿಭಾಗಗಳಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾದ ನಿಶಾಂತ್ ಡಿ, ಪ್ರೇಕ್ಷಾ, ಶ್ರೇಯಾ, ಭುವನ್ ಹಾಗೂ ಗಣಿತ ಮೇಳದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸ್ಕಂದ ತೇಜ ಅವರನ್ನು ಸನ್ಮಾನಿಸಲಾಯಿತು
ಶ್ರೀಕೃಷ್ಣ ಮಂದಿರದ ಗೌರವಾಧ್ಯಕ್ಷ ಶಂಕರನಾರಾಯಣ ಐತಾಳ್, ಅಧ್ಯಕ್ಷರಾದ ಭಾಸ್ಕರ ಪೂಜಾರಿ ಪೊಯ್ಯಕಂಡ, ಗೌರವ ಸಲಹೆಗಾರರಾದ ರಮೇಶ್ ಶೆಟ್ಟಿಗಾರ್ ಕರಿಂಗಾಣ, ಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷ ಲಕ್ಷ್ಮಿ ವಿ. ಪ್ರಭು ಉಪಸ್ಥಿತರಿದ್ದರು. ವಾಣಿ ಶೆಟ್ಟಿ ಬೈದರಡ್ಕ ಪ್ರಾರ್ಥಿಸಿ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ದ.ಕ ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ದಿನೇಶ್ ಅಮ್ಟೂರು ಸ್ವಾಗತಿಸಿದರು. ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಕೊಟ್ಟಾರಿ ನಿರ್ವಹಿಸಿದರು. ಮಂದಿರದ ಕಾರ್ಯದರ್ಶಿಗಳಾದ ಕುಶಾಲಪ್ಪ ಅಮ್ಟೂರು ವಂದಿಸಿದರು.
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 1300ಕ್ಕೂ ಅಧಿಕ ಸದಸ್ಯರಿರುವ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ನ ದಕ್ಷಿಣ ಕನ್ನಡ…