ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಬಂಟ್ವಾಳ ತಾಲೂಕು ಸಮಿತಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಬಿ ಸಿ ರೋಡ್ ನ ಲಯನ್ಸ್ ಭವನದಲ್ಲಿ ನಡೆಯಿತು.
ಸಭಾಧ್ಯಕ್ಷತೆಯನ್ನು ಎಸ್.ಡಿ.ಟಿ.ಯು. ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಸಲೀಮ್ ಜಿಕೆ ಗುರುವಾಯನಕೆರೆ ವಹಿಸಿದ್ದರು.
ಬಂಟ್ವಾಳ ತಾಲೂಕು ಸಮಿತಿಗೆ ನೂತನ ಅಧ್ಯಕ್ಷರಾಗಿ ಶಂಸುದ್ದೀನ್ ಪಳ್ಳಮಜಲು, ಉಪಾಧ್ಯಕ್ಷರಾಗಿ ಲತೀಫ್ ಬಿ.ಸಿ. ತಲಪಾಡಿ, ಕಾರ್ಯದರ್ಶಿಯಾಗಿ ಹುಸೈನಬ್ಬ ಕುಮೇರು, ಜತೆ ಕಾರ್ಯದರ್ಶಿಯಾಗಿ ಕಾದರ್ ಆಲಾಡಿ, ಕೋಶಾಧಿಕಾರಿಯಾಗಿ ಅಶ್ರಫ್ ಕೋಡಂಗೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಿದಾಯತ್ (ಸಿಟಿ ಅಂಬುಲೆನ್ಸ್), ಇಕ್ಬಾಲ್ ಪರ್ಲಿಯ, ಮುಸ್ತಫ ಕಾವಳಕಟ್ಟೆ ಆಯ್ಕೆಯಾಗಿದ್ದು, ಪದಾಧಿಕಾರಿಗಳ ಘೋಷಣೆ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷರು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಸಾಲ್ಮರ, ಬಂಟ್ವಾಳ ಸಂಚಾರಿ ಪೋಲಿಸ್ ಠಾಣೆಯ ಉಪ ನಿರೀಕ್ಷಕರಾದ ಸುಖೇಶ್ ಕೆ.ಪಿ, ಆದಿದ್ರಾವಿಡ ಸಮಾಜ ಸೇವಾಸಂಘದ ಕೋಶಾಧಿಕಾರಿ ರಾಜಾ ಚೆಂಡ್ತಿಮಾರ್, ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಬೋಳಿಯಾರ್, ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರಾದ ಫಿಲಿಫ್ ಹನ್ರಿ ಡಿಸೋಜ, ನ್ಯಾಯವಾದಿ ಕಬೀರ್ ಕೆಮ್ಮಾರ, ಕೈಕಂಬ ಆಟೋ ಪಾರ್ಕ್ ಅಧ್ಯಕ್ಷರಾದ ಆದಂ ಪಲ್ಲ, ಸ್ನೇಹ ಜೀವಿ ಚಾಲಕರ ಟ್ರೇಡ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಮೀರ್ ಉಪಸ್ಥಿತರಿದ್ದರು.ಮುಸ್ತಫ ಕಾವಳಕಟ್ಟೆ ಸ್ವಾಗತಿಸಿದರೆ,ಅನ್ವರ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಗೈದರು.