ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಆಚರಣೆ ಡಿ.31ರಂದು ನಡೆಯಿತು. ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಶ್ರದ್ಧಾಪೂರ್ವಕವಾಗಿ ಭಾಗವಹಿಸಿದರು.
ಬೆಳಿಗ್ಗೆ 6ಕ್ಕೆ ಶ್ರೀ ದೇವರ ಗರ್ಭಗೃಹದ ಬಾಗಿಲು ತೆರೆಯುವುದು, 6.15ಕ್ಕೆ ದೀಪ ಪ್ರಜ್ವಲನೆ, ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, 7.10ಕ್ಕೆ ನಿರ್ಮಲ ವಿಸರ್ಜನೆ ಪೂಜೆ, 7.30ರಿಂದ ಭಜನಾ ಕಾರ್ಯಕ್ರಮ ಆರಂಭಗೊಂಡು ರಾತ್ರಿ 9ರ ವರೆಗೆ ನಡೆಯಿತು.ಉತ್ತರ ದ್ವಾರದ ಮೂಲಕ ಶ್ರೀ ದೇವರ ದರ್ಶನಕ್ಕೆ ಅವಕಾಶ ದೊರೆಯಿತು.
ಮಧ್ಯಾಹ್ನ 12ಕ್ಕೆ ಮಧ್ಯಾಹ್ನ ಪೂಜೆ, ಸಾಯಂಕಾಲ 6ಕ್ಕೆ ಶ್ರೀ ದೇವರ ಗರ್ಭಗೃಹದ ಬಾಗಿಲು ತೆರೆಯುವುದು, ಸಾಯಂಕಾಲ 6.30ಕ್ಕೆ ದೀಪ ನಮಸ್ಕಾರ, ರಾತ್ರಿ 9ಕ್ಕೆ ರಾತ್ರಿ ಪೂಜೆ, ಭೂರಿ ಫಲಾಹಾರ ನಡೆಯಿತು.