ಮನೆಯಲ್ಲೇ ಮಾಡಿದ ಅಡುಗೆಯನ್ನು ಪ್ರಸ್ತುತಪಡಿಸಿ, ಬಹುಮಾನ ಗೆಲ್ಲುವ ಅವಕಾಶವನ್ನು ವಿಜಯ ಕರ್ನಾಟಕ ನೀಡುತ್ತಿದೆ. ವಿಕ ಸಾರಥ್ಯದಲ್ಲಿ ರಾಜ್ಯದೆಲ್ಲೆಡೆ ನಡೆಯುತ್ತಿರುವ ವಿಕ ಕರುನಾಡ ಸ್ವಾದ ಸ್ಪರ್ಧಾ ಕಾರ್ಯಕ್ರಮ ಜನವರಿ 3ರಂದು ಬೆಳಗ್ಗೆ 10.30ರಿಂದ ಬಿ.ಸಿ.ರೋಡಿನ ಪೊಸಳ್ಳಿಯಲ್ಲಿರುವ ಕುಲಾಲ ಸಮುದಾಯ ಭವನದಲ್ಲಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಸಹಕಾರದಲ್ಲಿ ನಡೆಯಲಿದೆ.ಅತ್ಯುತ್ತಮ ಸಸ್ಯಾಹಾರಿ ಖಾದ್ಯ ತಯಾರಿಸಿ ಪ್ರಶಸ್ತಿಗೆ ಆಯ್ಕೆಯಾಗಲು ಮಹಿಳೆಯರಿಗೆ ಸುವರ್ಣಾವಕಾಶವಾಗಿದೆ.
ವಿಧಾನ ಹೀಗಿರಲಿದೆ:
ಅಡುಗೆ ಕಲೆಗಾರಿಕೆಯನ್ನು ಮೆಚ್ಚುವ ಮಹಿಳೆಯರು ಒಂದು ಮುಖ್ಯ ಸಸ್ಯಾಹಾರಿ ಖಾದ್ಯ ಮತ್ತು ಇನ್ನೊಂದು ಎಣ್ಣೆಯಲ್ಲಿ ಕರಿದ ತಿಂಡಿಯನ್ನು ಮನೆಯಲ್ಲೇ ತಯಾರಿಸಿ ತರಬೇಕು. 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು ಮಹಿಳೆಯರು ತಾವು ತಂದ ಖಾದ್ಯಗಳನ್ನು ಪ್ರಸ್ತುತಪಡಿಸಲು ಅವಕಾಶ ನೀಡಲಾಗುತ್ತದೆ. ಸ್ಪರ್ಧಿಗಳು ತಾವೇ ಮಾಡಿ ತರುವ ತಲಾ ಎರಡು ಖಾದ್ಯಗಳನ್ನು ನುರಿತ ತೀರ್ಪುಗಾರರು ಪರಿಶೀಲಿಸಿ ಬಹುಮಾನ ಘೋಷಿಸುತ್ತಾರೆ. ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ, ಉಡುಗೊರೆ ಸಿಗಲಿದೆ ವಿಜೇತರ ಆಯ್ಕೆಯನ್ನು ಅಂದೇ ಮಾಡಲಾಗುತ್ತದೆ.
ಸ್ಪರ್ಧೆಗೆ ಕೇವಲ ಸಸ್ಯಾಹಾರ ಖಾದ್ಯಗಳನ್ನು ಮಾತ್ರ ತರಲು ಅವಕಾಶವಿದೆ. ಭಾಗವಹಿಸಲು ಇಚ್ಛಿಸುವ ಮಹಿಳೆಯರು ತಮ್ಮ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ 8861768672 ಸಂಖ್ಯೆಗೆ ವಾಟ್ಸಾಪ್ ಮಾಡಲು ಕೋರಲಾಗಿದೆ. ಫ್ರೀಡಂ ಹೆಲ್ದಿ ಕುಕಿಂಗ್ ಆಯಿಲ್ ಬಳಸಿಕೊಂಡು ಅಡುಗೆ ಮಾಡಿ, ಬಳಸಿದ ಖಾಲಿ ಪ್ಯಾಕೆಟ್ ಸ್ಥಳಕ್ಕೆ ತಂದಲ್ಲಿ ಹೆಚ್ಚುವರಿ ಪಾಯಿಂಟ್ಸ್ ಸಿಗಲಿದೆ. ವಿಕ ಕರುನಾಡ ಸ್ವಾದ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಮಹಿಳೆಯರು ತಕ್ಷಣ ನೋಂದಾಯಿಸಿಕೊಳ್ಳಬೇಕೆಂದು ವಿಜಯ ಕರ್ನಾಟಕ ಪ್ರಕಟಣೆ ತಿಳಿಸಿದೆ.