ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಆಚರಣೆ ಡಿ.31ರಂದು ನಡೆಯಲಿದೆ.ಶ್ರೀ ವಿಶ್ವಾವಸು ನಾಮ ಸಂವತ್ಸರದ ಪುಷ್ಯ ಶುದ್ಧ ಏಕಾದಶಿ 31ರ ಬುಧವಾರದಂದು ನಡೆಯಲಿದ್ದು, ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಶ್ರದ್ಧಾಪೂರ್ವಕವಾಗಿ ಭಾಗವಹಿಸಬೇಕಾಗಿ ವಿನಂತಿಸಲಾಗಿದೆ.
ಕಾರ್ಯಕ್ರಮದ ವಿವರ:
ಬೆಳಿಗ್ಗೆ 6ಕ್ಕೆ ಶ್ರೀ ದೇವರ ಗರ್ಭಗೃಹದ ಬಾಗಿಲು ತೆರೆಯುವುದು, 6.15ಕ್ಕೆ ದೀಪ ಪ್ರಜ್ವಲನೆ, ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, 7.10ಕ್ಕೆ ನಿರ್ಮಲ ವಿಸರ್ಜನೆ ಪೂಜೆ, 7.30ರಿಂದ ಭಜನಾ ಕಾರ್ಯಕ್ರಮ ಆರಂಭಗೊಂಡು ರಾತ್ರಿ 9ರ ವರೆಗೆ ನಡೆಯಲಿದೆ.ಉತ್ತರ ದ್ವಾರದ ಮೂಲಕ ಶ್ರೀ ದೇವರ ದರ್ಶನ ಭಾಗ್ಯ ಅಂದು ಲಭಿಸಲಿದೆ.
ಮಧ್ಯಾಹ್ನ 12ಕ್ಕೆ ಮಧ್ಯಾಹ್ನ ಪೂಜೆ, ಸಾಯಂಕಾಲ 6ಕ್ಕೆ ಶ್ರೀ ದೇವರ ಗರ್ಭಗೃಹದ ಬಾಗಿಲು ತೆರೆಯುವುದು, ಸಾಯಂಕಾಲ 6.30ಕ್ಕೆ ದೀಪ ನಮಸ್ಕಾರ, ರಾತ್ರಿ 9ಕ್ಕೆ ರಾತ್ರಿ ಪೂಜೆ, ಭೂರಿ ಫಲಾಹಾರ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.